ಚಿತ್ರದುರ್ಗ: ಮಳೆಯ ಅಬ್ಬರಕ್ಕೆ ಉತ್ತರ ಕರ್ನಾಟಕದ ಜನ ತತ್ತರಿಸಿ ಹೋಗಿದ್ದು, ನೆರೆ ಪೀಡಿತ ಬೆಳಗಾವಿ, ಬಾಗಲಕೋಟೆ ಜನರ ನೋವಿಗೆ ಚಿತ್ರದುರ್ಗದ ಮಂದಿ ಮನ ಮಿಡಿದಿದ್ದಾರೆ.
ನೆರೆ ಸಂತ್ರಸ್ತರ ಸಂಕಷ್ಟಕ್ಕೆ ಬೆಣ್ಣೆಯಂತೆ ಕರಗಿದ ಕೋಟೆನಾಡ ಮಂದಿ... ಸಿದ್ಧವಾದವು10 ಸಾವಿರ ರೊಟ್ಟಿಗಳು - north Karnataka
ಮಳೆಯ ಅಬ್ಬರಕ್ಕೆ ಉತ್ತರ ಕರ್ನಾಟಕದ ಜನ ತತ್ತರಿಸಿ ಹೋಗಿದ್ದು, ನೆರೆ ಪೀಡಿತ ಬೆಳಗಾವಿ, ಬಾಗಲಕೋಟೆ ಜನರ ನೋವಿಗೆ ಚಿತ್ರದುರ್ಗದ ಮಂದಿ ಮನ ಮಿಡಿದಿದ್ದಾರೆ.

ನೆರೆ ಸಂತ್ರಸ್ತರಿಗೆ ನೆರವಾದ ಚಿತ್ರದುರ್ಗದ ಜನ
ನೆರೆ ಸಂತ್ರಸ್ತರಿಗೆ ನೆರವಾದ ಚಿತ್ರದುರ್ಗದ ಜನ
ಹೌದು, ನೆರೆ ಸಂತ್ರಸ್ತರಿಗೆ ನೆರವಾಗಲು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ದೇವಪುರ ಮತ್ತು ಹಕ್ಕಿತಿಮ್ಮಯ್ಯನಹಟ್ಟಿ ಗ್ರಾಮದ ಯವಕರು ಮತ್ತು ಮಹಿಳೆಯರು ಹತ್ತುಸಾವಿರ ರೊಟ್ಟಿ, ಕೊಬ್ಬರಿ ಚಟ್ನಿ ಕಳುಹಿಸಲು ತಯಾರಿ ನಡೆಸಿದ್ದಾರೆ. ಬಿಸಿ ಬಿಸಿ ಜೋಳದ ರೊಟ್ಟಿ ತಯಾರು ಮಾಡಿ ಸಂತ್ರಸ್ತರ ಹೊಟ್ಟೆ ತುಂಬುವ ಕೆಲಸಕ್ಕೆ ಮುಂದಾಗಿದ್ದು, ಈ ಮೂಲಕ ಮಾನವೀಯತೆ ಮೇರೆದಿದ್ದಾರೆ.