ಕರ್ನಾಟಕ

karnataka

ETV Bharat / state

ಕುಡಿದ ಮತ್ತಿನಲ್ಲಿ ತಹಶೀಲ್ದಾರ್​ನಿಂದ ಹಲ್ಲೆ ಆರೋಪ: ತರಾಟೆಗೆ ತೆಗೆದುಕೊಂಡ ಸ್ಥಳೀಯರು - tahsildar assault on lorry driver

ಲಾರಿ ಹಾಗೂ ಕಾರಿನ ನಡುವೆ ಡಿಕ್ಕಿ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮಲ್ಲಿಕಾರ್ಜುನ ಅವರ ತಪ್ಪಿದ್ದರೂ ಕೂಡ ತಪ್ಪನ್ನು ಮರೆಮಾಚಿ ಲಾರಿ‌ ಚಾಲಕನ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆಂದು ಸ್ಥಳೀಯರು ಹಾಗೂ ಲಾರಿ ಚಾಲಕ ಆರೋಪಿಸಿದ್ದಾರೆ.

assault by Tahsildar
ಕುಡಿದ ಮತ್ತಿನಲಿ ತಹಶೀಲ್ದಾರ್​ನಿಂದ ಹಲ್ಲೆ ಆರೋಪ..

By

Published : Sep 6, 2020, 10:48 AM IST

ಚಿತ್ರದುರ್ಗ: ಕುಡಿದ ಮತ್ತಿನಲ್ಲಿ ಮೊಳಕಾಲ್ಮೂರು ತಹಶೀಲ್ದಾರ್ ಮಲ್ಲಿಕಾರ್ಜುನ ರಂಪಾಟ ನಡೆಸಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕುಡಿದ ಮತ್ತಿನಲಿ ತಹಶೀಲ್ದಾರ್​ನಿಂದ ಹಲ್ಲೆ ಆರೋಪ..

ಲಾರಿ ಹಾಗೂ ಕಾರಿನ ನಡುವೆ ಡಿಕ್ಕಿ ಹಿನ್ನೆಲೆಯಲ್ಲಿ ತಹಶೀಲ್ದಾರ್ ಮಲ್ಲಿಕಾರ್ಜುನ ಅವರ ತಪ್ಪಿದ್ದರೂ ಕೂಡ ತಪ್ಪನ್ನು ಮರೆಮಾಚಿ ಲಾರಿ‌ ಚಾಲಕನ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆಂದು ಸ್ಥಳೀಯರು ಹಾಗೂ ಲಾರಿ ಚಾಲಕ ಆರೋಪಿಸಿದ್ದಾರೆ. ಚಿತ್ರದುರ್ಗ ನಗರದ ಗ್ರಾಮಾಂತರ ಠಾಣೆಯ ಬಳಿ‌ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ಮೊಳಕಾಲ್ಮೂರು ತಹಶೀಲ್ದಾರ್ ಮಲ್ಲಿಕಾರ್ಜುನ ವಿರುದ್ಧ ಹಲ್ಲೆ ಆರೋಪ ಕೇಳಿ ಬಂದಿದೆ.

ತಹಶೀಲ್ದಾರ್ ಮಲ್ಲಿಕಾರ್ಜುನ

ಹಲ್ಲೆಗೊಳಗಾದ ಲಾರಿ ಚಾಲಕ‌ ಶ್ರೀಕಾಂತ್ ಅವರಿಗೆ ತಹಶೀಲ್ದಾರ್ ಮಲ್ಲಿಕಾರ್ಜುನ ಮುಖ ಮೂತಿ ನೋಡದೆ ಚಚ್ಚಿ ಹಾಕಿದ್ದಾರೆಂದು ಸ್ಥಳೀಯರು ತರಾಟೆಗೆ ತೆಗೆದುಕೊಂಡಿರುವ ವಿಡಿಯೋ ಕೂಡ ಚಿತ್ರೀಕರಿಸಿದ್ದಾರೆ. ಕಾರು ಚಾಲನೆ ಮಾಡಿಕೊಂಡು ತೆರಳುತ್ತಿದ್ದ ತಹಶೀಲ್ದಾರ್ ಮಲ್ಲಿಕಾರ್ಜುನ ಲಾರಿಗೆ ಡಿಕ್ಕಿ ಹೊಡೆದು ಬಳಿಕ ನನ್ನ ಮೇಲೆ ಕಲ್ಲಿನಿಂದ ಹಲ್ಲೆ‌ ಮಾಡಿದ್ದಾರೆ ಎಂದು ಲಾರಿ ಚಾಲಕ ಶ್ರೀಕಾಂತ್ ಪೊಲೀಸರಿಗೆ ದೂರಿದ್ದಾನೆ.

ಬಳಿಕ ಸಂಚಾರಿ ಠಾಣೆಗೆ ಆಗಮಿಸಿದ ತಹಶೀಲ್ದಾರ್ ಮಲ್ಲಿಕಾರ್ಜುನ ಅವರು ಲಾರಿ ಚಾಲಕ ಶ್ರೀಕಾಂತ್ ಮೇಲೆ ಯಾವುದೋ ಟೆನ್ಷನ್ ನಲ್ಲಿ ಹಲ್ಲೆ‌ ನಡೆಸಿದ್ದೇನೆಂದು ಒಪ್ಪಿಕೊಂಡಿದ್ದಾರೆ. ಚಿತ್ರದುರ್ಗ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ABOUT THE AUTHOR

...view details