ಕರ್ನಾಟಕ

karnataka

ETV Bharat / state

ಚಿತ್ರದುರ್ಗ ರಸ್ತೆ ಅಪಘಾತ : ಚಿಕಿತ್ಸೆಗೆ ದಾಖಲಾಗಿದ್ದ ಮೂವರು ಸಾವು.. ಮೃತರ ಸಂಖ್ಯೆ 8ಕ್ಕೆ ಏರಿಕೆ - Chitradurga Latest Crime News

ಕಾರ್ಮಿಕರು ಕಟ್ಟಡ ನಿರ್ಮಾಣ ಕೆಲಸಕ್ಕೆಂದು ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದರು. ಬಸ್ ಚಾಲಕನ ಅಜಾಗರೂಕತೆಯಿಂದ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಸದ್ಯ 8ಕ್ಕೆ ಏರಿಕೆಯಾಗಿದೆ..

Chitradurga Road Accident: Three deaths reported on treatment...
ಚಿತ್ರದುರ್ಗ ರಸ್ತೆ ಅಪಘಾತ: ಚಿಕಿತ್ಸೆಗೆ ದಾಖಲಾಗಿದ್ದ ಮೂವರು ಸಾವು... ಸಾವಿನ ಸಂಖ್ಯೆ 8ಕ್ಕೆ ಏರಿಕೆ

By

Published : Dec 28, 2020, 10:11 AM IST

Updated : Dec 28, 2020, 1:01 PM IST

ಚಿತ್ರದುರ್ಗ :ನಿನ್ನೆ ಬೆಳಗಿನ ಜಾವ ಬಿಜೆ ಕೆರೆ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ ಮೂವರು ಇಂದು ಸಾವನ್ನಪ್ಪಿದ್ದಾರೆ.

ಚಿತ್ರದುರ್ಗ ರಸ್ತೆ ಅಪಘಾತ : ಚಿಕಿತ್ಸೆಗೆ ದಾಖಲಾಗಿದ್ದ ಮೂವರು ಸಾವು.. ಮೃತರ ಸಂಖ್ಯೆ 8ಕ್ಕೆ ಏರಿಕೆ

ದೇವದುರ್ಗ ಮೂಲದ ನಾಗಮ್ಮ(42) ಪುತ್ರ ಜ್ಯೋತಿ ಬಸವ(20), ಹಾಗೂ ಬುಡ್ಡಪ್ಪ(40) ಎಂಬುವರು ಇಂದು ಬೆಳಗಿನ ಜಾವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಮೊಳಕಾಲ್ಮೂರು ತಾಲೂಕಿನ ಬಿಜೆ‌ ಕೆರೆ ಬಳಿಯಲ್ಲಿ ಕಾರ್ಮಿಕರು ತೆರಳುತ್ತಿದ್ದ ಕ್ರೂಸರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿ ದಂಪತಿ ಸೇರಿ ಐವರು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದರು‌.

ಬಳಿಕ ಗಾಯಗೊಂಡ 17 ಜನರನ್ನು ವಿವಿಧ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು‌. ಈ ಪೈಕಿ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಎಸ್ಎಸ್ ಆಸ್ಪತ್ರೆಗೆ ನಿನ್ನೆ ಮಧ್ಯಾಹ್ನದ ಸಮಯದಲ್ಲಿ ಕರೆದೊಯ್ಯುಲಾಗಿತ್ತು, ಸದ್ಯ ಆ ಮೂವರು ಸಾವನ್ನಪ್ಪಿದ್ದಾರೆ.

ಓದಿ: ಭೀಕರ ರಸ್ತೆ ಅಪಘಾತ : ಸ್ಥಳದಲ್ಲೇ ಐವರು ಸಾವು, 7 ಮಂದಿಗೆ ಗಾಯ

ಕಾರ್ಮಿಕರು ಕಟ್ಟಡ ನಿರ್ಮಾಣ ಕೆಲಸಕ್ಕೆಂದು ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದರು. ಬಸ್ ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಸದ್ಯ 8ಕ್ಕೆ ಏರಿಕೆಯಾಗಿದೆ. ಕೆಲವರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.

Last Updated : Dec 28, 2020, 1:01 PM IST

ABOUT THE AUTHOR

...view details