ಚಿತ್ರದುರ್ಗ:ಚಿತ್ರದುರ್ಗ ಜಿಲ್ಲಾಡಳಿತದ ನಿರ್ಲಕ್ಷ್ಯ ಬಯಲು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಚಿತ್ರದುರ್ಗ ಜಿಲ್ಲಾಡಳಿತದಿಂದ ಕ್ವಾರಂಟೈನ್ ವ್ಯವಸ್ಥೆ ಬಗ್ಗೆ ನಿರ್ಲಕ್ಷ್ಯಆರೋಪ: ವಿಡಿಯೋ ವೈರಲ್ - ಕ್ವಾರಂಟೈನ್‌ನಲ್ಲಿ ಸೂಕ್ತ ವ್ಯವಸ್ಥೆ ಇಲ್ಲ
ಕ್ವಾರಂಟೈನ್ನಲ್ಲಿರುವ ಜನರಿಗೆ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಅಂತ ಯುವಕನೊಬ್ಬ ವಿಡಿಯೋ ಮಾಡಿ ಕ್ವಾರಂಟೈನ್ ಸ್ಥಳದ ಅವ್ಯವಸ್ಥೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾನೆ.
![ಚಿತ್ರದುರ್ಗ ಜಿಲ್ಲಾಡಳಿತದಿಂದ ಕ್ವಾರಂಟೈನ್ ವ್ಯವಸ್ಥೆ ಬಗ್ಗೆ ನಿರ್ಲಕ್ಷ್ಯಆರೋಪ: ವಿಡಿಯೋ ವೈರಲ್ chitradurga qurantine viral video](https://etvbharatimages.akamaized.net/etvbharat/prod-images/768-512-7138279-thumbnail-3x2-again.jpg)
ಚಿತ್ರದುರ್ಗ ಜಿಲ್ಲಾಡಳಿತ ಮತ್ತೊಂದು ನಿರ್ಲಕ್ಷ್ಯ ಆರೋಪ
ಚಿತ್ರದುರ್ಗ ಜಿಲ್ಲಾಡಳಿತದಿಂದ ನಿರ್ಲಕ್ಷ್ಯ ಆರೋಪ
ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಕನಿಷ್ಠ ಸೌಲಭ್ಯವಿಲ್ಲ. ಕ್ವಾರಂಟೈನ್ ಮಾಡಲಾದ ಜನರಿಗೆ ಮಲಗುವುದಕ್ಕೆ ಬೆಡ್ ಶೀಟ್ ಇಲ್ಲ. ಇಲ್ಲಿ ನೀಡಲಾಗುವ ಊಟವೂ ಸರಿ ಇಲ್ಲ. ಎಲ್ಲರಿಗೂ ಒಂದೇ ಶೌಚಾಲಯ, ಕುಡಿಯುವ ನೀರಿನ ಪಾತ್ರೆ ಕೂಡ ಒಂದೇ ಇರಿಸಲಾಗಿದೆ ಎಂದು ಚಿತ್ರದುರ್ಗದ ಸಾಂಸ್ಥಿಕ ಕ್ವಾರಂಟೈನ್ ನ ದುಸ್ಥಿತಿಯನ್ನು ಯುವಕ ವಿಡಿಯೋ ಮೂಲಕ ತಿಳಿಸಿದ್ದಾನೆ ಅನಾವರಣ ಮಾಡಿದ್ದಾನೆ.