ಚಿತ್ರದುರ್ಗ: ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ವಾಹನ ಸವಾರರಿಗೆ ಗದರಿಸುವ ಮೂಲಕ ಮುಖಕ್ಕೆ ಮಾಸ್ಕ್ ಹಾಕುವಂತೆ ಪೊಲೀಸರು ಮನವಿ ಮಾಡುತ್ತಿದ್ದಾರೆ.
ನಿಯಮ ಉಲ್ಲಂಘಿಸುವ ಜನರಿಗೆ ಪೊಲೀಸರಿಂದ ದಂಡ ಪ್ರಯೋಗ - ಮುಖಕ್ಕೆ ಮಾಸ್ಕ್ ಹಾಕುವಂತೆ ಪೊಲೀಸರು ಮನವಿ
ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ವಾಹನ ಸವಾರರಿಗೆ ಗದರಿಸುವ ಮೂಲಕ ಮುಖಕ್ಕೆ ಮಾಸ್ಕ್ ಹಾಕುವಂತೆ ಪೊಲೀಸರು ಮನವಿ ಮಾಡುತ್ತಿದ್ದಾರೆ.
ಮಾಸ್ಕ್ ಧರಿಸುವಂತೆ ಚಿತ್ರದುರ್ಗ ಪೊಲೀಸರಿಂದ ಮನವಿ
ಇಷ್ಟು ದಿನಗಳ ಕಾಲ ಜನರನ್ನು ಮನವೊಲಿಸಲು ಲಾಠಿ ಬೀಸುವ ಮೂಲಕ, ಮಾಸ್ಕ್ ಹಾಕುವಂತೆ ಹಾಗೂ ಮನೆಯಿಂದ ಹೊರಬಾರದಂತೆ ಮನವಿ ಮಾಡುತ್ತಿದ್ದರು. ಅದ್ರೆ ಇದೀಗ ಚಿತ್ರದುರ್ಗದ ಪೊಲೀಸರು ಮಾಸ್ಕ್ ಹಾಕದೆ ವಾಹನ ಚಲಾಯಿಸುತ್ತಿರುವ ವಾಹನ ಸವಾರರಿಗೆ ಶರ್ಟ್ ಬಿಚ್ಚಿಸಿ ಮುಖಕ್ಕೆ ಕಟ್ಟಿಸಿ, ಒಂಟಿ ಕಾಲಿನಲ್ಲಿ ನಿಲ್ಲಿಸುವ ಮೂಲಕ ಶಿಕ್ಷೆ ನೀಡಿ, ಮಾಸ್ಕ್ ಹಾಕದೆ ರಸ್ತೆಗಿಳಿಯಬೇಡಿ ಎಂದು ಮನವಿ ಮಾಡಿದರು.