ಕರ್ನಾಟಕ

karnataka

ETV Bharat / state

ಹತ್ತಿ ಬೆಳೆ ನಾಶಪಡಿಸಿದ ದುಷ್ಕರ್ಮಿಗಳು: ರೈತನ ಆಕ್ರಂದನ - Outlaws destroyed the cotton crop

ರೈತನೋರ್ವನ ಜಮೀನಿನಲ್ಲಿ ಬೆಳೆದಿದ್ದ ಹತ್ತಿ ಬೆಳೆಯನ್ನು ಕಿಡಿಗೇಡಿಗಳು ನಾಶಪಡಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹಕ್ಕಿತಿಮ್ಮಯ್ಯನಹಟ್ಟಿಯಲ್ಲಿ ನಡೆದಿದೆ. ದುಷ್ಕರ್ಮಿಗಳ ಅಟ್ಟಹಾಸದಿಂದ ರೈತ ಕುಟುಂಬಸ್ಥರು ಕಂಗಾಲಾಗಿಗ್ದಾರೆ.

Chitradurga
ಹತ್ತಿ ಬೆಳೆ ನಾಶಪಡಿಸಿದ ದುಷ್ಕರ್ಮಿಗಳು..

By

Published : Jul 16, 2020, 2:55 PM IST

ಚಿತ್ರದುರ್ಗ: ಲಾಕ್ ಡೌನ್ ನಿಂದಾಗಿ ರೈತರ ಬದುಕು ಈಗಾಗಲೇ ದುಸ್ತರವಾಗಿದೆ. ಈ ಸಂಕಷ್ಟದ ನಡುವೆಯೇ ರೈತನೋರ್ವನ ಜಮೀನಿನಲ್ಲಿ ಬೆಳೆದಿದ್ದ ಹತ್ತಿ ಬೆಳೆಯನ್ನು ಕಿಡಿಗೇಡಿಗಳು ನಾಶಪಡಿಸಿದ್ದಾರೆ.

ಹತ್ತಿ ಬೆಳೆ ನಾಶಪಡಿಸಿದ ದುಷ್ಕರ್ಮಿಗಳು: ರೈತನ ಆಕ್ರಂದನ

ಹೊಸದುರ್ಗ ತಾಲೂಕಿನ ಹಕ್ಕಿತಿಮ್ಮಯ್ಯನಹಟ್ಟಿಯಲ್ಲಿ ಈ ಘಟನೆ‌ ನಡೆದಿದೆ. ಇದೇ ಗ್ರಾಮದ ರೈತ ನಾಗರಾಜ ಎಂಬುವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಹತ್ತಿ ಬೆಳೆಯನ್ನು ಯಾರೋ ದುಷ್ಕರ್ಮಿಗಳು ಹತ್ತಿ ಗಿಡಗಳನ್ನು ಕೊಚ್ಚಿ ಹಾಕಿ ನಾಶ ಮಾಡಿದ್ದಾರೆ. ಈ ಘಟನೆಯಿಂದ ಕೈಗೆ ಬಂದಿದ್ದ ತುತ್ತು ಬಾಯಿಗೆ ಬಂದಿಲ್ಲವೆಂದು ರೈತ ನಾಗರಾಜ್ ಕಣ್ಣೀರು ಸುರಿಸಿದ್ದಾರೆ.

ಈ‌ ಸಂಬಂಧ ಹೊಸದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಳೆ ನಾಶಪಡಿಸಿದ ಆರೋಪಿಯನ್ನು ತಕ್ಷಣ ಬಂಧಿಸುವಂತೆ ಪೊಲೀಸ್ ಇಲಾಖೆಗೆ ಒತ್ತಾಯಿಸಲಾಗಿದೆ.

ABOUT THE AUTHOR

...view details