ಚಿತ್ರದುರ್ಗ :ಹಣ ಡಬ್ಲಿಂಗ್ ಮಾಡಿಕೊಡುತ್ತೇವೆ ಎಂದು ವ್ಯಕ್ತಿಯನ್ನು ನಂಬಿಸಿ, ಬಳಿಕ ವಂಚಿಸಿ ಕೊಲೆ ಮಾಡಿದ್ದ ಆರೋಪಿಗಳನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ನವೀನ್, ನಾಗರಾಜ್, ನಾಗರಾಜಪ್ಪ, ಲೋಕೇಶ್ ಎಂದು ಗುರುತಿಸಲಾಗಿದೆ.
ಈ ಹಿಂದೆ ಜಿಲ್ಲೆಯ ಹೊಸದುರ್ಗ ಠಾಣಾ ವ್ಯಾಪ್ತಿಯಲ್ಲಿ ಕೀರ್ತಿರಾಜ್ ಎಂಬ ವ್ಯಕ್ತಿಯ ಕೊಲೆ ನಡೆದಿತ್ತು. ಬಳಿಕ ಮೇ 30 ರಂದು ಹೊಸದುರ್ಗ ನಿವಾಸಿ ಕೀರ್ತಿರಾಜ್ ಅವರ ಶವ ಭದ್ರಾ ಚಾನೆಲ್ ನಲ್ಲಿ ದೊರಕಿತ್ತು. ಈ ಕುರಿತು ತನಿಖೆ ನಡೆಸಿದ ಹೊಸದುರ್ಗ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದ ಪ್ರಮುಖ ಆರೋಪಿ ಶಿವಣ್ಣ ಕೊಲೆಗೀಡಾಗಿರುವುದಾಗಿ ತಿಳಿದುಬಂದಿದೆ.