ಕರ್ನಾಟಕ

karnataka

ETV Bharat / state

ಹಣ ದ್ವಿಗುಣ ವಂಚನೆ ಪ್ರಕರಣ : ಚಿತ್ರದುರ್ಗ ನಗರಸಭೆ ಜೆಡಿಎಸ್​ ಸದಸ್ಯ ಬಂಧನ - ಚಿತ್ರದುರ್ಗ ಮನಿ ಡಬ್ಲಿಂಗ್​ ಪ್ರಕರಣ

Money doubling case : ಹಣ ದ್ವಿಗುಣ ವಂಚನೆ ಆರೋಪದ ಮೇಲೆ ಚಿತ್ರದುರ್ಗ ನಗರಸಭೆ ಸದಸ್ಯನನ್ನು ಆಂಧ್ರಪ್ರದೇಶದಲ್ಲಿ ಬಂಧಿಸಲಾಗಿದೆ..

money doubling fraud case
ಹಣ ದ್ವಿಗುಣ ವಂಚನೆ ಪ್ರಕರಣ

By

Published : Dec 22, 2021, 12:44 PM IST

ಚಿತ್ರದುರ್ಗ :ಹಣ ದ್ವಿಗುಣ ವಂಚನೆ ಆರೋಪದ ಮೇಲೆ ಇಲ್ಲಿನ ನಗರಸಭೆ ಸದಸ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ನಗರಸಭೆಯ 4ನೇ ವಾರ್ಡ್ ಜೆಡಿಎಸ್ ಸದಸ್ಯ ಚಂದ್ರಶೇಖರ್ ಅಲಿಯಾಸ್ ಚಂದ್ರು ಬಂಧಿತ ಆರೋಪಿಯಾಗಿದ್ದಾರೆ.

ಚಂದ್ರಶೇಖರ್ ಖೋಟಾ ನೋಟು ಕಿಂಗ್ ಪಿನ್ ಎಂದೇ ಕುಖ್ಯಾತನಾಗಿರುವ. ಸಾಕಷ್ಟು ಪ್ರಕರಣಗಳಲ್ಲಿ ಬೇಕಾಗಿದ್ದ. ಆದರೆ, ಯಾವುದೇ ದಾಖಲೆಗಳು ಸಿಗುತ್ತಿರಲಿಲ್ಲ ಎಂದು ತಿಳಿದು ಬಂದಿದೆ.

ಎಫ್ಐಆರ್​ ಪ್ರತಿ

ಇತ್ತೀಚೆಗೆ ದೊಡ್ಡಬಳ್ಳಾಪುರ ಮೂಲದ ನಾಗರಾಜ್ ಎಂಬುವರಿಗೆ ವಂಚಿಸಿರುವ ಬಗ್ಗೆ ಚಿತ್ರದುರ್ಗದಲ್ಲಿ ಚಂದ್ರಶೇಖರ್ ವಿರುದ್ದ ಪ್ರಕರಣ ದಾಖಲಾಗಿತ್ತು. ₹6 ಲಕ್ಷ ಪಡೆದು 18 ಲಕ್ಷ ನಕಲಿ ನೋಟು ನೀಡಿ ವಂಚಿಸಿರುವ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಚಿತ್ರದುರ್ಗದ ಬಡಾವಣೆ ಠಾಣೆ ಸಿಪಿಐ ಶಂಕರಪ್ಪ ನೇತೃತ್ವದ ತಂಡವು ಚಂದ್ರಶೇಖರ್ ಆಂಧ್ರಪ್ರದೇಶದಲ್ಲಿ ಇರುವ ಮಾಹಿತಿ ತಿಳಿದು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ABOUT THE AUTHOR

...view details