ಕರ್ನಾಟಕ

karnataka

ETV Bharat / state

ಲಾಕ್​ಡೌನ್​ ನಿಯಮ ಉಲ್ಲಂಘಿಸಿ ನಿರಾಶ್ರಿತರಿಗೆ ಭೋಜನ ವ್ಯವಸ್ಥೆ: ಬಿಜೆಪಿ ಸಂಸದನ ವಿರುದ್ಧ ಆರೋಪ

ಚಿತ್ರದುರ್ಗದ ಬಿಜೆಪಿ ಸಂಸದ ಎ. ನಾರಾಯಣಸ್ವಾಮಿ ಅವರು ತಮ್ಮ ಜನ್ಮ ದಿನದ ಪ್ರಯುಕ್ತ ನಿರಾಶ್ರಿತರ ಕೇಂದ್ರದಲ್ಲಿ ವಿಶೇಷ ಭೋಜನದ ವ್ಯವಸ್ಥೆ ಮಾಡಿದ್ದಾರೆ. ಈ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

Chitradurga MP no social gap in celebration of birthday
ನಿರಾಶ್ರಿತರ ಕೇಂದ್ರದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡು ಸಾಮಾಜಿಕ ಅಂತರ ಮರೆತ ಚಿತ್ರದುರ್ಗ ಸಂಸದ

By

Published : May 17, 2020, 10:12 PM IST

Updated : May 17, 2020, 10:18 PM IST

ಚಿತ್ರದುರ್ಗ: ತಮ್ಮ ಜನ್ಮದಿನದ ಪ್ರಯುಕ್ತ ನಿರಾಶ್ರಿತರ ಕೇಂದ್ರದಲ್ಲಿ ವಿಶೇಷ ಭೋಜನ ವ್ಯವಸ್ಥೆ ಮಾಡಿದ ಸಂಸದ ಎ. ನಾರಾಯಣ ಸ್ವಾಮಿ ಅವರು ಸಾಮಾಜಿಕ ಅಂತರ ಕಾಪಾಡಿಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಗೋನೂರು ಗ್ರಾಮದ ಬಳಿಯ ನಿರಾಶ್ರಿತರ ಕೇಂದ್ರದಲ್ಲಿ ಸಂತ್ರಸ್ತರಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಿಸಿದ ಬಿಜೆಪಿ ಸಂಸದ ಎ. ನಾರಾಯಣಸ್ವಾಮಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ನಿಯಮ ಉಲ್ಲಂಘಿಸಿದ್ದಾರೆ. ಸಂಸದರ ಕುಟುಂಬದಿಂದ ಆಹಾರ ವಿತರಣೆ ಹಮ್ಮಿಕೊಂಡಿದ್ದು, ಕೆಲವರು ಮುಖಗವಸು ಸಹ ಧರಿಸದೆ ಆಗಮಿಸಿದ್ದರು ಎಂಬ ಮಾತುಗಳು ಕೇಳಿಬಂದಿವೆ.

ನಿರಾಶ್ರಿತರ ಕೇಂದ್ರಕ್ಕೆ ಹಲವು ಕಾರ್ಯಕರ್ತರು ಹಾಗೂ ಇತರೆ ಅಧಿಕಾರಿಗಳು ಭೇಟಿ ನೀಡಿ ಆಹಾರ ಬಡಿಸಿದ್ದಾರೆ ಎನ್ನಲಾಗುತ್ತಿದೆ.

Last Updated : May 17, 2020, 10:18 PM IST

ABOUT THE AUTHOR

...view details