ಕರ್ನಾಟಕ

karnataka

ETV Bharat / state

ಆಗಾಗ ಕಾಣಿಸಿಕೊಂಡು ಗ್ರಾಮಸ್ಥರನ್ನ ಬೆಚ್ಚಿ ಬೀಳಿಸುತ್ತಿದ್ದ ಚಿರತೆ ಕೊನೆಗೂ ಸೆರೆ - Chitradurga Forest Department

ಚಿರತೆ ಕಾಟ ತಡೆಯಲಾರದೇ ಬೆಟ್ಟದ ನಾಗೇನಹಳ್ಳಿಯ ಜನರು ಅದನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದರು. ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಗ್ರಾಮದಲ್ಲಿ ಅರಣ್ಯಾಧಿಕಾರಿಗಳು ಬೋನಿರಿಸಿದ್ದರು. ಸದ್ಯ ನಿನ್ನೆ ರಾತ್ರಿ ಚಿರತೆ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

Chitradurga: Leopard captures villagers with frequent appearances
ಚಿತ್ರದುರ್ಗ: ಆಗಾಗ ಕಾಣಿಸಿಕೊಂಡು ಗ್ರಾಮಸ್ಥರನ್ನು ಗಾಬರಿ ಪಡಿಸುತ್ತಿದ್ದ ಚಿರತೆ ಸೆರೆ

By

Published : Jun 22, 2020, 2:29 PM IST

Updated : Jun 22, 2020, 10:10 PM IST

ಚಿತ್ರದುರ್ಗ: ತಾಲೂಕಿನ ಬೆಟ್ಟದ ನಾಗೇನಹಳ್ಳಿ ಗ್ರಾಮದ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.

ಚಿತ್ರದುರ್ಗ: ಆಗಾಗ ಕಾಣಿಸಿಕೊಂಡು ಗ್ರಾಮಸ್ಥರನ್ನು ಗಾಬರಿ ಪಡಿಸುತ್ತಿದ್ದ ಚಿರತೆ ಸೆರೆ

ಚಿರತೆ ಕಾಟ ತಡೆಯಲಾರದೆ ಬೆಟ್ಟದ ನಾಗೇನಹಳ್ಳಿಯ ಜನರು ಅದನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದರು. ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಗ್ರಾಮದಲ್ಲಿ ಅರಣ್ಯಾಧಿಕಾರಿಗಳು ಬೋನಿರಿಸಿದ್ದರು. ಸದ್ಯ ನಿನ್ನೆ ರಾತ್ರಿ ಚಿರತೆ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಚಿರತೆಯನ್ನು ನೋಡಲು ಜನಸಾಗರವೇ ಹರಿದು ಬಂದಿತ್ತು. ಕೊರೊನಾ ಭೀತಿ, ಸಾಮಾಜಿಕ ಅಂತರ ಎಲ್ಲವನ್ನೂ ಮರೆತ ಹಳ್ಳಿಯ ಜನ, ಚಿರತೆ ನೋಡಲು ಮುಗಿಬಿದ್ರು. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ನಂತರ ಚಿರತೆಯನ್ನು ಚಿತ್ರದುರ್ಗಕ್ಕೆ ಸಾಗಿಸಲಾಯಿತು.

Last Updated : Jun 22, 2020, 10:10 PM IST

ABOUT THE AUTHOR

...view details