ಕರ್ನಾಟಕ

karnataka

ಚಿತ್ರದುರ್ಗ: ಅಪ್ರಾಪ್ತೆ ಮೇಲೆ ಪತಿ ಹಾಗೂ ಆತನ ಮೂವರು ಸ್ನೇಹಿತರಿಂದ ಗ್ಯಾಂಗ್​ರೇಪ್​

By

Published : Jun 26, 2022, 8:01 PM IST

ಅಪ್ರಾಪ್ತೆಯನ್ನು ವಿವಾಹವಾಗಿದ್ದ ವ್ಯಕ್ತಿಯೋರ್ವ ತನ್ನ ಮೂವರು ಸ್ನೇಹಿತರೊಂದಿಗೆ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಬಾಲಕಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

Husband and his three friends made mass rape on a minor girl
ಚಿತ್ರದುರ್ಗ

ಚಿತ್ರದುರ್ಗ:ಕೋಟೆನಾಡು ಚಿತ್ರದುರ್ಗದಲ್ಲಿ ಸಾರ್ವಜನಿಕರು ತಲೆ ತಗ್ಗಿಸುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಅಪ್ರಾಪ್ತೆಯನ್ನು ಮದುವೆಯಾಗಿದ್ದಲ್ಲದೆ, ಪಾಪಿ ಪತಿಯೋರ್ವ ತನ್ನ ಮೂವರು ಸ್ನೇಹಿತರೊಂದಿಗೆ ಸೇರಿಕೊಂಡು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾನೆ. ಹದಿನೇಳುವರೆ ವರ್ಷ ವಯಸ್ಸಿನ ಬಾಲಕಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಪ್ರೀತಿ ಪ್ರೇಮ ಎಂದು ಬಾಲಕಿಯ ತಲೆ ಕೆಡಿಸಿ ಮದುವೆಯಾಗಿದ್ದ ವ್ಯಕ್ತಿ, ಬಳಿಕ ಆಕೆಯ ಶೀಲ ಶಂಕಿಸಿ ಜಗಳವಾಡುತ್ತಿದ್ದನಂತೆ. ತವರಿಗೆ ತೆರಳಿದ್ದ ಬಾಲಕಿಯನ್ನು ನಿರ್ಮಾಣ ಹಂತದ ಕಟ್ಟಡಕ್ಕೆ ಎಳೆದೊಯ್ದು ಈ ಕೃತ್ಯ ಎಸಗಲಾಗಿದೆ ಎಂದು ಖುದ್ದು ಬಾಲಕಿ ನೀಡಿದ‌ ಹೇಳಿಕೆ ಆಧರಿಸಿ ಪೊಲೀಸರು ಎಫ್ಐಆರ್​ ದಾಖಲಿಸಿಕೊಂಡಿದ್ದಾರೆ. ಮಹಿಳಾ ಠಾಣೆಯ ಪೊಲೀಸರು ಬಾಲಕಿಯ ಪತಿ ಹಾಗೂ ಆತನ ಸ್ನೇಹಿತರ ವಿರುದ್ಧ ಅತ್ಯಾಚಾರ, ಕೊಲೆ ಯತ್ನ ಹಾಗೂ ಬಾಲ್ಯವಿವಾಹ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಡೆದಿದ್ದಾರು ಏನು?: ಜೂನ್‌ 7ರಂದು ಬಾಲಕಿಗೆ ದೂರವಾಣಿ ಕರೆ ಮಾಡಿದ ಪತಿ, ಚಿತ್ರದುರ್ಗ ನಗರದ ಮಾಳಪ್ಪನಹಟ್ಟಿ ರಸ್ತೆಯ ಬಳಿ ಬರುವಂತೆ ಸೂಚಿಸಿದ್ದಾನೆ. ನಿರ್ಜನ ಪ್ರದೇಶದಲ್ಲಿರುವ ನಿರ್ಮಾಣ ಹಂತದ ಕಟ್ಟಡಕ್ಕೆ ಎಳೆದೊಯ್ದು ಪತಿಯೊಂದಿಗೆ ಮೂವರು ಸ್ನೇಹಿತರು ಇದ್ದರು. ಅಕ್ರಮ ಸಂಬಂಧದ ವಿಚಾರವಾಗಿ ಪತಿ ಹಾಗೂ ಬಾಲಕಿಯ ನಡುವೆ ಗಲಾಟೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಯಾದಗಿರಿ: ಸೋದರ ಮಾವನಿಂದಲೇ ಅತ್ಯಾಚಾರಕ್ಕೊಳಗಾದ ಬಾಲಕಿ ಗರ್ಭಿಣಿ

‘ವಿವಸ್ತ್ರಗೊಳಿಸಿ ಸಿಗರೇಟಿನಿಂದ ದೇಹ ಸುಟ್ಟರು. ಅತ್ಯಾಚಾರವೆಸಗಲು ಮುಂದಾದಾಗ ಕೂಗಾಡುತ್ತಿದ್ದೆ. ತಲೆಗೆ ಬಿದ್ದ ಬಲವಾದ ಏಟಿನಿಂದ ಪ್ರಜ್ಞೆ ಕಳೆದುಕೊಂಡೆ. ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುವಾಗ ಪ್ರಜ್ಞೆ ಮರಳಿತು. ಘಟನೆಯ ಬಗ್ಗೆ ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿ ಪತಿ ಬೆದರಿಸಿದ್ದನು’ ಎಂದು ಎಫ್ ಐಆರ್​ನ ಪ್ರತಿಯಲ್ಲಿ ಬಾಲಕಿ ವಿವರಿಸಿದ್ದಾಳೆ.

ABOUT THE AUTHOR

...view details