ಕರ್ನಾಟಕ

karnataka

ETV Bharat / state

ಚಿತ್ರದುರ್ಗದಲ್ಲಿ 59 ಮಂದಿ ರಕ್ತದ ಮಾದರಿ, ಗಂಟಲು ದ್ರವ ಪರೀಕ್ಷೆಗೆ ರವಾನೆ - ಹೆಲ್ತ್ ಬುಲೆಟಿನ್

ಚಿತ್ರದುರ್ಗ ಆರೋಗ್ಯ ಇಲಾಖೆ ಕೊರೊನಾಗೆ ಸಂಬಂಧಪಟ್ಟಂತೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.

Palaksha
ಡಿಹೆಚ್ಓ ಪಾಲಾಕ್ಷ

By

Published : Mar 26, 2020, 11:31 AM IST

ಚಿತ್ರದುರ್ಗ:ಮಾರಕ ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ 59 ಜನರ ರಕ್ತದ ಮಾದರಿ, ಗಂಟಲು ದ್ರವ ಪರೀಕ್ಷೆಗೆ ರವಾನಿಸಲಾಗಿದ್ದು, 59 ಜನರ ಪೈಕಿ 28 ಜನರ ಕೊರೊನಾ ನೆಗೆಟಿವ್ ವರದಿ ಬಂದಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.

ವರದಿ

ಇಡೀ ಜಿಲ್ಲೆಯಲ್ಲಿ ಭೀಮಸಮುದ್ರದ ಮಹಿಳೆಯೊಬ್ಬರಿಗೆ ಮಾತ್ರ ವರದಿ ಪಾಸಿಟಿವ್ ಬಂದಿದ್ದು, ಇನ್ನುಳಿದ 24 ಜನರ ವರದಿ ವೈದ್ಯರ ಕೈಸೇರಬೇಕಿದೆ. ಚಿತ್ರದುರ್ಗ ಜಿಲ್ಲೆಗೆ ವಿದೇಶದಿಂದ ಬಂದಿರುವ ಒಟ್ಟು 117 ಜನರ ಮೇಲೆ‌ ಈಗಾಗಲೇ ವೈದ್ಯರು ನಿಗಾ ಇಡಲಾಗಿದ್ದು, ಮುಂಜಾಗ್ರತಾ ಕ್ರಮವನ್ನು ಕೂಡ ವಹಿಸಲಾಗಿದೆ ಎಂದು ಈಟಿವಿ ಭಾರತಗೆ ಡಿಹೆಚ್ಓ ಡಾ.ಪಾಲಾಕ್ಷರವರು ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details