ಕರ್ನಾಟಕ

karnataka

ETV Bharat / state

ತಾಲೂಕು ಪಂಚಾಯತ್​​ ಕಚೇರಿಗೆ ಮುತ್ತಿಗೆ ಹಾಕಿ ರೈತರ ಪ್ರತಿಭಟನೆ - ಚಿತ್ರದುರ್ಗ ರೈತರ ಪ್ರತಿಭಟನೆ

ಉದ್ಯೋಗ ಖಾತ್ರಿ ಯೋಜನೆಯ ಮಾನವ ದಿನಗಳ ಕೂಲಿ ಹೊರತುಪಡಿಸಿ ಸಾಮಗ್ರಿಗಳ ಬಿಲ್​ ನೀಡಲು ಅಧಿಕಾರಿಗಳು ಮುಂದಾಗದಿರೋದಕ್ಕೆ ರೈತ ಸಂಘಟನೆಗಳು ಹಿರಿಯೂರು ತಾಲೂಕು ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದವು.

formers protest
ರೈತರ ಪ್ರತಿಭಟನೆ

By

Published : Jan 13, 2021, 7:33 PM IST

ಚಿತ್ರದುರ್ಗ:ಉದ್ಯೋಗ ಖಾತ್ರಿ ಯೋಜನೆಗಳ ಫಲಾನುಭವಿಗಳಿಗೆ ಬಿಲ್​ ಪಾವತಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಹಿರಿಯೂರು ತಾಲೂಕು ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.

ರೈತರ ಪ್ರತಿಭಟನೆ

ಕಳೆದ 2017ರಿಂದ ಇದುವರೆಗೂ ಹಿರಿಯೂರು ತಾಲೂಕಿನ 33 ಗ್ರಾಮ ಪಂಚಾಯತ್​ಗಳ ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳ ಬಿಲ್​ಗಳನ್ನು ಅಧಿಕಾರಿಗಳು ಪಾವತಿಸಲು ಮುಂದಾಗಿಲ್ಲ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಇನ್ನು ಉದ್ಯೋಗ ಖಾತ್ರಿ ಯೋಜನೆಯ ಮಾನವ ದಿನಗಳ ಕೂಲಿ ಹೊರತುಪಡಿಸಿ ಸಾಮಗ್ರಿಗಳ ಬಿಲ್​ ನೀಡಲು ಅಧಿಕಾರಿಗಳು ಮುಂದಾಗದಿರೋದಕ್ಕೆ ರೈತ ಸಂಘಟನೆ ಕಾರ್ಯಕರ್ತರು ತಾಲೂಕು ಪಂಚಾಯತ್​ ಕಚೇರಿ ಮುಂಭಾಗದಲ್ಲಿ ಅಕ್ರೋಶ ಹೊರ ಹಾಕಿದರು.

ಇದೇ ವೇಳೆ ವಸತಿ ಯೋಜನೆಗಳು ಫಲಾನುಭವಿಗಳಿಗೆ ತಲುಪದೆ ಉಳ್ಳವರ ಪಾಲಾಗುತ್ತಿವೆ‌. ನರೇಗಾ ಯೋಜನೆಗಳು ಕಳಪೆ ಕಾಮಗಾರಿಗಳಿಂದ ಕೂಡಿವೆ. ಇನ್ನು ರೈತರಿಗೆ ಪಂಚಾಯತ್​ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ‌ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ABOUT THE AUTHOR

...view details