ಕರ್ನಾಟಕ

karnataka

ETV Bharat / state

ದೇವರ ಉತ್ಸವ ಮೂರ್ತಿ ಒಡವೆ ವಿಚಾರಕ್ಕೆ 2 ಗುಂಪುಗಳ ನಡುವೆ ಮಾರಾಮಾರಿ - ಗಲಾಟೆ

ದೇವರ ಉತ್ಸವ ಮೂರ್ತಿ ಒಡವೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿದೆ. ಗಲಾಟೆಯಲ್ಲಿ ಎಂಟು ಜನರ ಮೇಲೆ ಹಲ್ಲೆ ಆಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.

ಮಾರಾಮಾರಿ

By

Published : Apr 6, 2019, 5:28 PM IST

ಚಿತ್ರದುರ್ಗ:ದೇವರ ಉತ್ಸವ ಮೂರ್ತಿ ಒಡವೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಕರಿಯೋಬನಹಳ್ಳಿಯ ಮಾರಮ್ಮ ದೇವಸ್ಥಾನದ ಬಳಿ ನಡೆದಿದೆ.

ಸೀತಾರಾಮಯ್ಯ ಹಾಗೂ ಸಿದ್ದೇಶ್ವರ ಪ್ರಸಾದ್ ಗುಂಪುಗಳ ನಡುವೆ ಜಗಳವಾಗಿ, ಪರಸ್ಪರ ಕಲ್ಲು ತೂರಾಟ ಕೂಡ ನಡೆದಿದೆ. ಗಲಾಟೆಯಲ್ಲಿ ಎಂಟು ಜನರ ಮೇಲೆ ಹಲ್ಲೆ ಆಗಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಮಾರಾಮಾರಿಯಲ್ಲಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲು ‌ಮಾಡಲಾಗಿದೆ.

ಎರಡು ಗುಂಪುಗಳ ನಡುವೆ ಮಾರಾಮಾರಿ

ಪದೇ ಪದೇ ನಡೆಯುವ ಗಲಾಟೆಗಳಿಂದ ಮಾರಮ್ಮ ದೇವತೆಯ ವಸ್ತ್ರಾಭರಣಗಳನ್ನು ಈರ ಚಿಕ್ಕಣ್ಣ ದೇವರ ಪೂಜಾರಿ ಅಧೀನಕ್ಕೆ ತಾಲೂಕು ಆಡಳಿತ ನೀಡಿತ್ತು. ಇದರಿಂದ ತಾಲೂಕು ಆಡಳಿತದ ವಿರುದ್ಧ ಭಕ್ತರು ಆಕ್ರೋಶ ಹೊರಹಾಕಿದ್ದು, ಎರಡು ಗುಂಪುಗಳ ನಡುವಿನ ಗೊಂದಲಕ್ಕೆ ಕಾರಣವಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವಂತೆ ಜಿಲ್ಲಾಡಳಿತದ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಿಲ್ಲ ಎನ್ನಲಾಗಿದೆ.

ಘಟನೆ ಸಂಬಂಧ ಐಮಂಗಲ ಪೊಲೀಸ್​​ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ABOUT THE AUTHOR

...view details