ಚಿತ್ರದುರ್ಗ: ಭದ್ರಾ ನಾಲೆ ನೀರಿಗಾಗಿ ಆಗ್ರಹಿಸಿ ಇದೇ 17 ರಂದು ಕಾತ್ರಾಳ್ ಕೆರೆ ಅಚ್ಚುಕಟ್ಟು ಪ್ರದೇಶದ ರೈತರು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಲು ನಿರ್ಧರಿಸಿದ್ದಾರೆ.
2 ತಾಲೂಕುಗಳಿಗೂ ಸಮಾನವಾಗಿ ನೀರು ಹಂಚಿ: ಭದ್ರೆಗಾಗಿ ರೈತರ ಪ್ರತಿಭಟನೆ - undefined
ಭದ್ರಾ ನಾಲೆ ನೀರು ಹಂಚಿಕೆ ಬಗ್ಗೆ ಚಿತ್ರದುರ್ಗ ಹಾಗೂ ಜಗಳೂರು ತಾಲೂಕಿನ ರೈತರಲ್ಲಿ ಮನಸ್ತಾಪ ಏರ್ಪಟ್ಟಿದ್ದು, ಈ ಕುರಿತು ಚಿತ್ರದುರ್ಗ ತಾಲೂಕಿನ ಬಳ್ಳೆಕಟ್ಟೆ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 04 ನ್ನು ಇದೇ 17 ರಂದು ಬಂದ್ ಮಾಡಿ ಸರ್ಕಾರದ ಗಮನಕ್ಕೆ ತರಲು ರೈತರು ಮುಂದಾಗಿದ್ದಾರೆ.

ನೀರು ಹಂಚಿಕೆ ಬಗ್ಗೆ ಚಿತ್ರದುರ್ಗ ಹಾಗೂ ಜಗಳೂರು ತಾಲೂಕಿನ ರೈತರಲ್ಲಿ ಮನಸ್ತಾಪ ಏರ್ಪಟ್ಟಿರುವ ಕುರಿತು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ನುಲೇನೂರು ಶಂಕರಪ್ಪ, ಜಗಳೂರು ತಾಲೂಕಿನ ರೈತರು ಭದ್ರಾ ನಾಲೆಯಿಂದ ಬರುವ 2.4 ಟಿಎಂಸಿ ನೀರನ್ನು ನಮಗೇ ಬೇಕೆಂದು ಪಟ್ಟು ಹಿಡಿದಿರುವುದು ಸರಿಯಲ್ಲ. ಚಿತ್ರದುರ್ಗ ತಾಲೂಕಿನ ಕಾತ್ರಾಳು, ಮುದ್ದಾಪುರ, ಯಳಗೋಡು, ಸುಲ್ತಾನಿಪುರ ಮಾರ್ಗವಾಗಿ ಕಾಲುವೆ ಮೂಲಕ ಹರಿಯುವ 2.4 ಟಿಎಂಸಿ ನೀರನ್ನು ನಮಗೇ ಬೇಕೆಂದು ಪಟ್ಟು ಹಿಡಿಯುವುದು ದಡ್ಡತನ. ಇದರಲ್ಲಿ ನಮಗೂ ಹಕ್ಕಿದೆ. ನೀರನ್ನು ಸರಿ ಸಮಾನವಾಗಿ ಹರಿಸಿ, ಜಗಳೂರು ತಾಲೂಕಿನ ಸಂಗೇನಹಳ್ಳಿ, ನಿಬಗೂರು, ಜಮ್ಮಾಪುರ, ಭರಮಸಮುದ್ರ, ಬಿದರಕೆರೆ, ಜಗಳೂರು ಕೆರೆಗಳನ್ನು ತುಂಬಿಸಲಿ ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಚಿತ್ರದುರ್ಗ ತಾಲೂಕಿನ ಕಾತ್ರಾಳು, ಮುದ್ದಾಪುರ, ಯಳಗೋಡು, ಸುಲ್ತಾನಿಪುರ ಮಾರ್ಗದ ಮೂಲಕ ಹರಿಯುವ ನೀರಿನ ಮಾರ್ಗ ಬದಲಿಸುವಂತೆ ಜಗಳೂರು ರೈತರು ಆಗ್ರಹಿಸುವುದು ಸರಿಯಲ್ಲ. ಈ ಕುರಿತು ಚಿತ್ರದುರ್ಗ ತಾಲೂಕಿನ ಬಳ್ಳೆಕಟ್ಟೆ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 04 ನ್ನು ಇದೇ 17 ರಂದು ಬಂದ್ ಮಾಡಿ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲು ಮುಂದಾಗಿರುವುದಾಗಿ ಅವರು ತಿಳಿಸಿದರು.