ಕರ್ನಾಟಕ

karnataka

ETV Bharat / state

ಪರೇಡ್​ನಲ್ಲಿ ರೌಡಿ ಶೀಟರ್​ಗಳ ಚಳಿ ಬಿಡಿಸಿದ ಡಿವೈಎಸ್ಪಿ

ಡಿವೈಎಸ್ಪಿ ಪಾಂಡುರಂಗಪ್ಪನವರು ರೌಡಿ ಶೀಟರ್​ಗಳ ಪರೇಡ್ ನಡೆಸಿ, ಸಮಾಜದಲ್ಲಿ ಯಾವುದೇ ಅಹಿತಕರ ಘಟನೆ ನಡೆಸದೆ ಸಾರ್ವಜನಿಕರ ರಕ್ಷಣೆ ಕಾಪಾಡಬೇಕೆಂದು ಖಡಕ್​ ಎಚ್ಚರಿಕೆ ನೀಡಿದರು.

ಡಿವೈಎಸ್ಪಿ   ಪಾಂಡುರಂಗಪ್ಪ
Chitradurga DYSP Panduranga

By

Published : Dec 12, 2019, 8:32 PM IST

ಚಿತ್ರದುರ್ಗ:ಸಮಾಜದ ಹಿತರಕ್ಷಣೆ ಮಾಡದೆ ಅಶಾಂತಿ ಮೂಡಿಸಿ ದುಷ್ಕೃತ್ಯ ನಡೆಸುವ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ‌ ಕೈಗೊಳ್ಳಲಾಗುವುದು ಎಂದು ಡಿವೈಎಸ್ಪಿ ಪಾಂಡುರಂಗಪ್ಪ ಅವರು ರೌಡಿ ಶೀಟರ್​ಗಳಿಗೆ ಎಚ್ಚರಿಕೆ ನೀಡಿದರು.

ರೌಡಿ ಶೀಟರ್​ಗಳ ಪರೇಡ್

ಇಂದು ಡಿವೈಎಸ್ಪಿ ಪಾಂಡುರಂಗಪ್ಪನವರು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ರೌಡಿ ಶೀಟರ್​ಗಳ ಪರೇಡ್ ನಡೆಸಿದರು. ಈ ವೇಳೆ ಸಾರ್ವಜನಿಕರ ಹಿತ ಕಾಪಾಡುವುದು ಪೊಲೀಸರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಯಾವ ವ್ಯಕ್ತಿ ಸಾರ್ವಜನಿಕರಿಗೆ ತೊಂದರೆ ಮಾಡಿ ಸಮಾಜದಲ್ಲಿ ಅಹಿತಕರ ಘಟನೆಗಳನ್ನು ಸೃಷ್ಠಿ ಮಾಡುತ್ತಾರೋ ಅಂತಹ ರೌಡಿಗಳಿಗೆ ಕ್ಷಮೆ ಇಲ್ಲ ಎಂದು ಖಡಕ್ ವಾರ್ನಿಂಗ್ ನೀಡಿದರು.

ಇನ್ನೂ ಮಟ್ಕಾ ದಂಧೆ ಹಾಗೂ ಜೂಜಾಟ ನಡೆಸುವುದು ಅಪರಾಧ ಎಂದು ತಿಳಿದಿದ್ದರೂ ಕೆಲವರು ಆ ಕೆಲಸಕ್ಕೆ ಕೈ ಹಾಕಿದ್ದಾರೆ. ಇದನ್ನ ಯಾವುದೇ ಕಾರಣಕ್ಕೂ ನಾವು ಸಹಿಸುವುದಿಲ್ಲ. ಎಚ್ಚೆತ್ತುಕೊಂಡು ಜೀವನ ನಡಸಬೇಕು. ಈ ವಿಭಾಗದ ಠಾಣೆಗಳಲ್ಲಿ ಒಟ್ಟು 347 ರೌಡಿ ಶೀಟರ್​​ಗಳಿದ್ದಾರೆ. ಇದರಲ್ಲಿ 117 ಜನ ಮಾತ್ರ ಹಾಜರಾಗಿದ್ದು, ಉಳಿದ 230 ಜನರನ್ನು ಎರಡು ದಿನಗಳ ಬಳಿಕ ಪರೇಡ್​ ನಡೆಸಲಾಗುತ್ತದೆ ಎಂದರು.

ABOUT THE AUTHOR

...view details