ಕರ್ನಾಟಕ

karnataka

ETV Bharat / state

ಚಿತ್ರದುರ್ಗ ಜಿಲ್ಲಾಧಿಕಾರಿ ಕಾರು ಹಾಗೂ ಬಸ್​ ನಡುವೆ ಡಿಕ್ಕಿ - ಕಾರು ಹಾಗೂ ಕೆಎಸ್​​ಆರ್​​ಟಿಸಿ ಬಸ್​​ ನಡುವೆ ಮುಖಾಮುಕಿ ಡಿಕ್ಕಿ

ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಚಲಿಸುತ್ತಿದ್ದ ಕಾರು ಹಾಗೂ ಕೆಎಸ್​​ಆರ್​​ಟಿಸಿ ಬಸ್​​ ನಡುವೆ ಮುಖಾಮುಕಿ ಡಿಕ್ಕಿ ಸಂಭವಿಸಿದೆ.

Chitradurga District Collector car accident
ಚಿತ್ರದುರ್ಗ ಜಿಲ್ಲಾಧಿಕಾರಿ ಕಾರು ಅಪಘಾತ

By

Published : Feb 18, 2020, 3:45 PM IST

ಚಿತ್ರದುರ್ಗ: ಕೆಎಸ್ಆರ್​​​ಟಿಸಿ ಬಸ್ ಹಾಗೂ ಜಿಲ್ಲಾಧಿಕಾರಿ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಶಿವಗಂಗಾ ಗ್ರಾಮದ ಬಳಿ ನಡೆದಿದೆ.

ಚಿತ್ರದುರ್ಗ ಜಿಲ್ಲಾಧಿಕಾರಿ ಕಾರು ಅಪಘಾತ

ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಸೇಫ್ ಆಗಿದ್ದಾರೆ ಎನ್ನಲಾಗಿದೆ. ಹಸು ಅಡ್ಡ ಬಂದಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಸರ್ಕಾರಿ ಬಸ್​​ಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಜಿಲ್ಲಾಧಿಕಾರಿ ವಿನೋತ್ ಪ್ರಿಯಾರ ಎಡಗೈ ಬೆರಳಿಗೆ ಪುಟ್ಟ ಗಾಯವಾಗಿದ್ದರಿಂದ ಚಿಕಿತ್ಸೆ ಪಡೆದು ವಿಶ್ರಾಂತಿಗೆ ತೆರಳಿದ್ದಾರೆ ಎನ್ನಲಾಗಿದೆ.

ಇನ್ನು ಕಾರು ಚಾಲಕ ಮನ್ಸೂರ್​​ಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಪಘಾತ ಸಂಭವಿಸಿದ್ದರಿಂದ ಬೇರೆ ಕಾರಿನಲ್ಲಿ ಡಿಸಿ ವಿನೋತ್ ಪ್ರಿಯಾ ಚಿತ್ರದುರ್ಗಕ್ಕೆ ಮರಳಿದರು. ಪ್ರಕರಣ ಚಿತ್ರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಎಸ್ಪಿ ಜಿ.ರಾಧಿಕಾ, ಎಎಸ್ಪಿ ಮಹಾಲಿಂಗ ನಂದಗಾವಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details