ಚಿತ್ರದುರ್ಗ: ಜಿಲ್ಲೆಯ ಡಿಸಿಸಿ ಬ್ಯಾಂಕ್ 2019-20ನೇ ಸಾಲಿನಲ್ಲಿ ರೂ.2.67 ಕೋಟಿ ಲಾಭ ಗಳಿಸಿದೆ ಎಂದು ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷರಾದ ಡಿ.ಸುಧಾಕರ್ ತಿಳಿಸಿದರು.
ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಗೆ 2.67 ಕೋಟಿ ರೂ. ಲಾಭ : ಡಿ ಸುಧಾಕರ್ - Chitradurga DCC Bank latest news
ಜಿಲ್ಲೆಯಲ್ಲಿರುವ ಡಿಸಿಸಿ ಬ್ಯಾಂಕ್ ಈ ವರ್ಷದಲ್ಲಿ ಎರಡು ಕೋಟಿಗೂ ಅಧಿಕ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.
ನಗರದ ಶ್ರೀರಾಮ ಕಲ್ಯಾಣಮಂಟಪದಲ್ಲಿ ಏರ್ಪಡಿಸಿದ್ದ ಡಿಸಿಸಿ ಬ್ಯಾಂಕಿನ 57ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕಿನ ಲಾಭಾಂಶದಲ್ಲಿ ಈ ವರ್ಷ ಬ್ಯಾಂಕಿನ ಸದಸ್ಯರಿಗೆ ಶೇ.2 ಡಿವಿಡೆಂಡ್ ನೀಡಲಾಗಿದೆ. ಕಳೆದ ಐದು ವರ್ಷದ ಹಿಂದೆ ಬ್ಯಾಂಕ್ ಕೇವಲ ರೂ.100 ಕೋಟಿ ಠೇವಣಿ ಹೊಂದಿದ್ದು, ಪ್ರಸ್ತುತ ರೂ.302 ಕೋಟಿ ಠೇವಣಿ ಹೊಂದಿರುತ್ತದೆ ಎಂದರು.
ಬ್ಯಾಂಕ್ 201-20ನೇ ಸಾಲಿನಲ್ಲಿ 41508 ರೈತರಿಗೆ ರೂ.20334.61 ಲಕ್ಷಗಳ ಕೆಸಿಸಿ ಸಾಲ ವಿತರಿಸಿದೆ. ಮಧ್ಯಮಾವಧಿ ಕೃಷಿ ಭೂ ಅಭಿವೃದ್ಧಿ ಸಾಲ ರೂ.4738.79 ಲಕ್ಷಗಳನ್ನು ನೀಡಿದೆ. ಸ್ವಸಹಾಯ ಗುಂಪುಗಳಿಗೆ ರೂ.923.25 ಲಕ್ಷ, ಬಡವರ ಬಂಧು ಯೋಜನೆಯಡಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ರೂ.3.51 ಲಕ್ಷ ಸಾಲ ವಿತರಿಸಿದೆ ಎಂದು ಮಾಹಿತಿ ನೀಡಿದರು.