ಚಿತ್ರದುರ್ಗ: ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ ನಡೆಯುವ ಮೂರು ತಾಲೂಕುಗಳ ಗ್ರಾಮ ಪಂಚಾಯತಿಗಳ ಚುನಾವಣೆಗೆ ಸ್ಪರ್ಧಿಸಲು 5,217 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ದವಾಗಿವೆ ಎಂದು ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಎರಡನೇ ಹಂತವಾಗಿ ಹಿರಿಯೂರು, ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲೂಕಿನ ವ್ಯಾಪ್ತಿಗೆ ಬರುವ 89 ಗ್ರಾಮಪಂಚಾಯತಿಗಳ ಪೈಕಿ 1,668 ಸ್ಥಾನಗಳಿದ್ದು, 5,217 ಅಭ್ಯರ್ಥಿಗಳು ನಾಮಪತ್ರಗಳು ಸಲ್ಲಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಚುನಾವಣೆ ನಡೆಸಲು ಈಗಾಗಲೇ ಎಲ್ಲಾ ಸಿದ್ಧತೆ ಮಾಡಿಕೊಂಡು ಆಯಾ ತಾಲೂಕುಗಳ ಅನ್ವಯವಾಗಿ ಚುನಾವಣಾ ಅಧಿಕಾರಿಗಳನ್ನು ಕೂಡ ನೇಮಕ ಮಾಡಲಾಗಿದೆ. ಹಿರಿಯೂರು 1,875, ಚಳ್ಳಕೆರೆ 2,325 ಹಾಗೂ ಮೊಳಕಾಲ್ಮೂರು ತಾಲೂಕಿನಲ್ಲಿ 1,017 ನಾಮಪತ್ರಗಳು ಸಲ್ಲಿಕೆ ಸೇರಿದಂತೆ ಒಟ್ಟು 5,217 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿದ್ದಾರೆ.
ಓದಿ:ಬೀದಿನಾಯಿಗಳ ಪಾಲಿಗೆ ಅನ್ನದಾತೆಯಾದ ಕೋಟೆನಾಡಿನ 'ಪದ್ಮಾ'
ಹಿರಿಯೂರು 1, ಚಳ್ಳಕೆರೆ ತಾಲೂಕಿನ 2 ಹಾಗೂ ಮೂಳಕಾಲ್ಮೂರು ತಾಲೂಕಿನಲ್ಲಿ 1 ಸೇರಿದಂತೆ ಒಟ್ಟು 3 ಸ್ಥಾನಗಳಿಗೆ ನಾಮಪತ್ರಗಳು ಸಲ್ಲಿಕೆಯಾಗದೆ ಖಾಲಿ ಉಳಿದಿದೆ. ಇನ್ನು ಚಳ್ಳಕೆರೆ ತಾಲೂಕಿನ 11, ಹಿರಿಯೂರು ತಾಲೂಕಿನ 1 ಹಾಗೂ ಮೊಳಕಾಲ್ಮೂರು 9 ಒಟ್ಟು ಸೇರಿ 21 ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಜಿಲ್ಲಾಧಿಕಾರಿ ಹೇಳಿದರು.