ಕರ್ನಾಟಕ

karnataka

ETV Bharat / state

ಕೊರೊನಾ ಹಿನ್ನೆಲೆ ಈದ್-ಮಿಲಾದ್ ಸಾಮೂಹಿಕ ಮೆರವಣಿಗೆ ನಿಷೇಧ - DC Prohibited eid-milad procession in district

ಹೆಚ್ಚಿನ ಜನರು ಒಂದೆಡೆ ಸೇರುವುದು ಸಾಮಾನ್ಯವಾಗಿರುತ್ತಿತ್ತು. ಆದರೆ, ಕೊರೊನಾ‌ ಹಿನ್ನೆಲೆ ಹಬ್ಬವನ್ನು ಸರಳವಾಗಿ ಮತ್ತು ಭಕ್ತಿಪೂರ್ವಕವಾಗಿ ಆಚರಿಸಬೇಕು..

Kavita Munnikeri
Kavita Munnikeri

By

Published : Oct 23, 2020, 5:20 PM IST

ಚಿತ್ರದುರ್ಗ: ಜಿಲ್ಲೆಯಾದ್ಯಂತ ಅ.30ರಂದು ಆಚರಿಸಲಿರುವ ಈದ್-ಮಿಲಾದ್ ಹಬ್ಬದ ಪ್ರಯುಕ್ತ ನೆರವೇರಲಿರುವ ಯಾವುದೇ ರೀತಿಯ ಸಾಮೂಹಿಕ ಮೆರವಣಿಗೆ (ಜುಲೂಸ್)‌ ತೆರೆದ ಸ್ಥಳಗಳಲ್ಲಿ ಒಂದೆಡೆ ಸೇರುವುದನ್ನು ಕಡ್ಡಾಯವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಆದೇಶ ಹೊರಡಿಸಿದ್ದಾರೆ.

ಸರ್ಕಾರದ ಕಾರ್ಯದರ್ಶಿಗಳು ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಪ್ ಇಲಾಖೆ, ಬೆಂಗಳೂರು ಅವರು ಈದ್ ಮಿಲಾದ್ ಹಬ್ಬವನ್ನು ಅ. 30ರಂದು ಮುಸ್ಲಿಂ ಬಾಂಧವರು, ಸಾಮೂಹಿಕವಾಗಿ ಫಾತೇಹಾ, ಝಿಯಾರತ್ ಹಾಗೂ ಅನ್ನದಾನದೊಂದಿಗೆ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿತ್ತು.

ಈ ವೇಳೆ ಹೆಚ್ಚಿನ ಜನರು ಒಂದೆಡೆ ಸೇರುವುದು ಸಾಮಾನ್ಯವಾಗಿರುತ್ತಿತ್ತು. ಆದರೆ, ಕೊರೊನಾ‌ ಹಿನ್ನೆಲೆ ಹಬ್ಬವನ್ನು ಸರಳವಾಗಿ ಮತ್ತು ಭಕ್ತಿಪೂರ್ವಕವಾಗಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸೋಂಕು ತೀವ್ರವಾಗಿ ಹರಡುತ್ತಿದ್ದು, ಈ ಸಂಬಂಧ ಕೋವಿಡ್-19ರ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ನಿರ್ದೇಶನ ನೀಡಿದ್ದಾರೆ.

ABOUT THE AUTHOR

...view details