ಚಿತ್ರದುರ್ಗ:ಜಿಲ್ಲೆಯಲ್ಲಿ ಸದ್ಯ 78 ಜನರ ಮೇಲೆ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು ನಿಗಾ ವಹಿಸಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ 78 ಜನರ ಮೇಲೆ ವೈದ್ಯರ ತೀವ್ರ ನಿಗಾ: 25 ಜನರಿಗೆ ನೆಗೆಟೀವ್ - ಕೊರೊನಾ
ಚಿತ್ರದುರ್ಗ ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಸೋಂಕು ದೃಢಪಟ್ಟಿರುವ ಯಾವುದೇ ಒಂದೇ ಒಂದು ಪ್ರಕರಣ ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳಿದ್ದಾರೆ.
![ಚಿತ್ರದುರ್ಗದಲ್ಲಿ 78 ಜನರ ಮೇಲೆ ವೈದ್ಯರ ತೀವ್ರ ನಿಗಾ: 25 ಜನರಿಗೆ ನೆಗೆಟೀವ್ Vinoth priya](https://etvbharatimages.akamaized.net/etvbharat/prod-images/768-512-6521922-thumbnail-3x2-chai.jpg)
ವೈದ್ಯಕೀಯ ನಿಗದಲ್ಲಿ ಇರುವವರ ಪೈಕಿ, ವಿಮಾನ ನಿಲ್ದಾಣ ಪ್ರಾಧಿಕಾರದ ವೈದ್ಯರ ತಪಾಸಣೆಗೆ ಒಳಪಟ್ಟವರು 117 ಜನರಿದ್ದಾರೆ. ಆಸ್ಪತ್ರೆಯಲ್ಲಿ ಯಾರನ್ನು ನಿಗಾದಲ್ಲಿ ಇರಿಸಿಲ್ಲ. ಇದುವರೆಗೂ 39 ಜನರ ಗಂಟಲು ದ್ರವ್ಯ ಹಾಗೂ ರಕ್ತ ಮಾದರಿಯನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದರಲ್ಲಿ 25 ಜನರ ವರದಿ ನೆಗಟೀವ್ ಎಂದು ಬಂದಿದೆ. 6 ಜನರ ಮಾದರಿಯನ್ನು ಪ್ರಕ್ರಿಯೆಗೊಳಿಸಲಾಗಿಲ್ಲ. ಇನ್ನುಳಿದ 8 ಮಂದಿಯ ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಸೋಂಕು ದೃಢಪಟ್ಟಿರುವ ಯಾವುದೇ ಪ್ರಕರಣ ವರದಿಯಾಗಿಲ್ಲ. ಸಾರ್ವಜನಿಕರು ಸುಳ್ಳು ಮಾಹಿತಿ ಅಥವಾ ವದಂತಿಗಳಿಗೆ ಕಿವಿಗೊಡಬಾರದು. ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.