ಚಿತ್ರದುರ್ಗ: ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ಧರ್ಮಸಭೆಯಲ್ಲಿ ಚಿತ್ರದುರ್ಗ ಮೂಲದ ವ್ಯಕ್ತಿಯೊಬ್ಬರು ಭಾಗಿಯಾಗಿದ್ದಾರೆ ಎಂದು ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಮಾಹಿತಿ ನೀಡಿದ್ದಾರೆ.
ದೆಹಲಿ ಧರ್ಮಸಭೆಯಲ್ಲಿ ಭಾಗಿಯಾಗಿದ್ದವರ ಮಾಹಿತಿ ನೀಡಿದ ಚಿತ್ರದುರ್ಗ ಜಿಲ್ಲಾಧಿಕಾರಿ - ನಿಜಾಮುದ್ದೀನ್ ಧರ್ಮಸಭೆಗೆ ಹೋಗಿದ್ದವರ ಮಾಹಿತಿ ನೀಡಿದ ವಿನೋತ್ ಪ್ರಿಯಾ
ಚಿತ್ರದುರ್ಗ ಮೂಲದ ಮೂವರು ಧರ್ಮಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರೆಳಿದ್ದರು. ಮೂವರ ಪೈಕಿ ಒಬ್ಬರು ಇನ್ನೂ ದೆಹಲಿಯಲ್ಲೇ ಉಳಿದಿದ್ದಾರೆ. ಉಳಿದ ಇಬ್ಬರು ಬೆಂಗಳೂರು ಮೂಲಕ ಚಿತ್ರದುರ್ಗಕ್ಕೆ ಮರಳಿದ್ದಾರೆ ಎಂದು ಚಿತ್ರದುರ್ಗ ಡಿಸಿ ಮಾಹಿತಿ ನೀಡಿದ್ದಾರೆ.

ಚಿತ್ರದುರ್ಗ ಜಿಲ್ಲಾಧಿಕಾರಿ
ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದುರ್ಗ ಮೂಲದ ಮೂವರು ಧರ್ಮಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರೆಳಿದ್ದರು. ಮೂವರ ಪೈಕಿ ಒಬ್ಬರು ಇನ್ನೂ ದೆಹಲಿಯಲ್ಲೇ ಉಳಿದಿದ್ದಾರೆ. ಉಳಿದ ಇಬ್ಬರು ಬೆಂಗಳೂರು ಮೂಲಕ ಚಿತ್ರದುರ್ಗಕ್ಕೆ ಮರಳಿದ್ದಾರೆ. ಆದರೆ ಈ ಇಬ್ಬರನ್ನು ಒಬ್ಬರು ಮಾತ್ರ ಧರ್ಮಸಭೆಯಲ್ಲಿ ಭಾಗಿಯಾಗಿದ್ದರು ಎಂಬ ಮಾಹಿತಿ ದೊರೆತಿದೆ. ಈ ಇಬ್ಬರನ್ನೂ ಗುರುತಿಸಿ ಐಸೋಲೇಷನ್ ವಾರ್ಡಿನಲ್ಲಿ ಇರಿಸುವ ಮೂಲಕ ಇಬ್ಬರ ರಕ್ತ , ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದೆ ಎಂದು ಡಿಸಿ ವಿನೋತ್ ಪ್ರಿಯಾ ಮಾಹಿತಿ ನೀಡಿದರು.