ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್ ಪ್ರಿಯ ಜಿಲ್ಲೆಯಲ್ಲಿನ ಕೊರೊನಾ ಸೋಂಕಿತರ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಗುಜರಾತ್ನಿಂದ ಬಂದ ತಬ್ಲಿಘಿಗಳ ಪೈಕಿ ಆರು ಮಂದಿಗೆ ಸೋಂಕು: ಚಿತ್ರದುರ್ಗ ಡಿಸಿ ಸ್ಪಷ್ಟನೆ - ತಬ್ಲಿಘಿಗಳಿಗೆ ಕೊರೊನಾ ಸೋಂಕು
ಗುಜರಾತಿನಿಂದ ಮರಳಿದ 6 ಜನ ತಬ್ಲಿಘಿಗಳಿಗೆ ಕೊರೊನಾ ಸೋಂಕು ಇರುವ ಹಿನ್ನೆಲೆ ಚಿತ್ರದುರ್ಗ ಜಿಲ್ಲಾಧಿಕಾರಿ ವಿನೋತ್ ಪ್ರಿಯ ಕೊರೊನಾ ಸೋಂಕಿತರ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಗುಜರಾತಿನಿಂದ ಮರಳಿದ 6 ಜನ ತಬ್ಲಿಘಿಗಳಿಗೆ ಕೊರೊನಾ ಸೋಂಕು ಇರುವ ಹಿನ್ನೆಲೆ ಪತ್ರಿಕಾ ಪ್ರಕಟಣೆ ಮೂಲಕ ಜಿಲ್ಲಾಧಿಕಾರಿ ಸ್ಪಷ್ಟನೆ ನೀಡಿದರು. ಮೇ 05 ರಂದು 15 ಜನ ಅಹಮದಾಬಾದ್ ನಿಂದ ಚಿತ್ರದುರ್ಗಕ್ಕೆ ಆಗಮಿಸಿದ್ದು, ಎಲ್ಲಾ 15 ಮಂದಿಯನ್ನೂ ಹೈವೇ ಬಳಿಯ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. 15 ಜನರ ಪೈಕಿ ನಿನ್ನೆ 3, ಇಂದು 3 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ ಎಂದು ತಿಳಿಸಿದರು.
ಇನ್ನೂ, ಈವರೆಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 7 ಜನರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಅದರಲ್ಲಿ ಒಬ್ವರು ಗುಣಮುಖರಾಗಿದ್ದಾರೆ. ಸೋಂಕು ತಡೆಗೆ ಜನರು ಸಹಕರಿಸಬೇಕು. ಅಗತ್ಯ ಕ್ರಮಗಳನ್ನು ಅನುಸರಿಸಬೇಕು. ಅನಗತ್ಯವಾಗಿ ಮನೆಯಿಂದ ಹೊರಬರಕೂಡದು, ಗುಂಪು ಗುಂಪಾಗಿ ಸೇರಕೂಡದು ಎಂದು ಡಿಸಿ ಮನವಿ ಮಾಡಿದರು.