ಚಿತ್ರದುರ್ಗ :ಜಿಲ್ಲೆಯಲ್ಲಿ ಈಗಾಗಲೇ ಕೊರೊನಾ ಸೋಂಕಿತರ ಸಂಖ್ಯೆ 80ಕ್ಕೆ ತಲುಪಿದ್ದರಿಂದ ಜನರಲ್ಲಿ ಆತಂಕ ಹೆಚ್ಚಿದೆ. ಕೋವಿಡ್ ಭೀತಿಯಿಂದ ಗ್ರಾಮಸ್ಥರು ಊರಿಗೆ ಬೇಲಿ ಹಾಕಿರುವ ಘಟನೆ ನಡೆದಿದೆ.
ಕೊರೊನಾ ಬರದಂತೆ ತಡೆಯೋಕೆ 'ಮುಳ್ಳಿನ ಬೇಲಿ' ಹಾಕಿದ ಜನ - coronavirus latest news
ಭಟ್ರಹಳ್ಳಿ ಸುತ್ತಮುತ್ತ ಗ್ರಾಮಗಳಲ್ಲಿ 3 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದರಿಂದ ಮುಂಜಾಗ್ರತಾ ಕ್ರಮವಾಗಿ ಗ್ರಾಮಸ್ಥರು ಬೇಲಿ ಹಾಕಿದ್ದಾರೆ..
ಗ್ರಾಮಕ್ಕೆ ಬೇಲಿ ಹಾಕಿದ ಜನ
ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಭಟ್ರಹಳ್ಳಿ ಗ್ರಾಮದ ಹೊರ ವಲಯದಲ್ಲಿ ರಸ್ತೆಗೆ ಗ್ರಾಮಸ್ಥರು ಬೇಲಿ ಹಾಕಿದ್ದು, ಹೊರ ಜಿಲ್ಲೆ, ರಾಜ್ಯದಿಂದ ಆಗಮಿಸುವವರಿಗೆ ನಿಷೇಧ ಹೇರಿದ್ದಾರೆ. ಈಗಾಗಲೇ ಭಟ್ರಹಳ್ಳಿ ಸುತ್ತಮುತ್ತ ಗ್ರಾಮಗಳಲ್ಲಿ 3 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದರಿಂದಾಗಿ ಮುಂಜಾಗ್ರತಾ ಕ್ರಮವಾಗಿ ಗ್ರಾಮಸ್ಥರು ಬೇಲಿ ಹಾಕಿದ್ದಾರೆ.