ಚಿತ್ರದುರ್ಗ:ವೈದ್ಯರನ್ನು ಬೆಂಬಿಡದೆ ಕಾಡುತ್ತಿದ್ದ ಕೊರೊನಾ ಇದೀಗ ಮೆಡಿಕಲ್ ಸ್ಟೋರ್ ಸಿಬ್ಬಂದಿಗೂ ಕಾಡಲಾರಂಭಿಸಿದೆ. ಚಳ್ಳಕೆರೆ ಪಟ್ಟಣದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ಕಳೆದ ಎರಡು ದಿನಗಳ ಹಿಂದೆಯಷ್ಟೇ ಮೆಡಿಕಲ್ ಏಜನ್ಸಿಯ ಸಿಬ್ಬಂದಿಯೊಬ್ಬರಿಗೆ ಸೋಂಕು ತಗುಲಿದ್ದು, ಅವರು ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೆಡಿಕಲ್ ಫಾರ್ಮಸಿಗೂ ಕಾಲಿಟ್ಟ ಕೊರೊನಾ: ಆತಂಕದಲ್ಲಿ ಚಳ್ಳಕೆರೆ ಜನ - Corona enter to edical pharmacy
ಕೊರೊನಾ ಇಷ್ಟು ದಿನಗಳ ಕಾಲ ಆಸ್ಪತ್ರೆ ಸೇರಿದಂತೆ ವೈದ್ಯರನ್ನು ಕಾಡುತ್ತಿತ್ತು. ಆದ್ರೀಗ ಔಷಧಿ ಅಂಗಡಿಗಳಿಗೂ ಕಾಲಿಟ್ಟಿದೆ. ಇದ್ರ ಪರಿಣಾಮ, ಚಿತ್ರದುರ್ಗ ಜಿಲ್ಲೆಯ ಜನ್ರು ಮೆಡಿಕಲ್ ಸ್ಟೋರ್ಗಳಿಗೆ ಹೋಗಲು ಹಿಂದೇಟು ಹಾಕ್ತಿದ್ದಾರೆ.
ಈ ಮೆಡಿಕಲ್ ಏಜನ್ಸಿಯಿಂದ ಇಡೀ ತಾಲೂಕಿನ ಎಲ್ಲಾ ಮೆಡಿಕಲ್ ಸ್ಟೋರ್ಗಳಿಗೂ ಮೆಡಿಸಿನ್ ಸರಬರಾಜು ಮಾಡಲಾಗುತ್ತಿತ್ತು. ಹೀಗಾಗಿ ಘಟನೆ ಸಾರ್ವಜನಿಕರನ್ನು ಬೆಚ್ಚಿ ಬೀಳಿಸಿದ್ದು, ಔಷಧಿ ಖರೀದಿಸಲು ಜನಸಾಮಾನ್ಯರು ಹಿಂದೇಟು ಹಾಕುತ್ತಿದ್ದಾರೆ. ಮೆಡಿಕಲ್ ಏಜನ್ಸಿಯ ಪ್ರಾಥಮಿಕ ಸಂಪರ್ಕದಲ್ಲಿದ್ದವನ್ನು ತಪಾಸಣೆಗೊಳಪಡಿಸುವಲ್ಲಿ ಆರೋಗ್ಯ ಇಲಾಖೆ ನಿರ್ಲಕ್ಷ ವಹಿಸಿದೆ ಎಂಬ ಆರೋಪವೂ ಕೇಳಿಬಂದಿದೆ.
ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಲಾಕ್ಷ ಅವರನ್ನು ಕೇಳಿದ್ರೆ, ಮೆಡಿಕಲ್ ಏಜನ್ಸಿಯ ಫಾರ್ಮಸಿಸ್ಟ್ಗೆ ಪಾಸಿಟಿವ್ ಬಂದಿದ್ದು ನಾವು ಅಲರ್ಟ್ ಆಗಿದ್ದೇವೆ. ಸೋಂಕಿತರು ಸಂಪರ್ಕದಲ್ಲಿದ್ದ ಶಂಕಿತರನ್ನೆಲ್ಲಾ ಸ್ವಾಬ್ ಟೆಸ್ಟ್ ಮಾಡಿಸಲಾಗಿದೆ. ಅಲ್ದೇ ಸೋಂಕಿತರ ಕುಟುಂಬದ ಸದಸ್ಯರನ್ನು ಸಹ ತಪಾಸಣೆಗೆ ಒಳಪಡಿಸಿದ್ದೇವೆ. ಅಗತ್ಯ ಮುಂಜಾಗ್ರತಾ ಕ್ರಮ ಜರುಗಿಸಲಾಗಿದೆ. ಹೀಗಾಗಿ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.