ಚಿತ್ರದುರ್ಗ: ನಗರದ ಮುಖ್ಯ ರಸ್ತೆ ಅಗಲೀಕರಣ ವೇಳೆ ತಾರತಮ್ಯ ಆರೋಪ ಕೇಳಿ ಬಂದಿದ್ದು, ನಗರಸಭೆ ಸದಸ್ಯ ದೀಪಕ್ ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದರು.
ರಸ್ತೆ ವಿಸ್ತರಣೆ :ಕೆಲ ಪ್ರಭಾವಿಗಳ ಕಟ್ಟಡ ಬಿಟ್ಟು ಉಳಿದವರ ಕಟ್ಟಡ ತೆರವು ಆರೋಪ - road widening
ಚಿತ್ರದುರ್ಗ ನಗರದಲ್ಲಿ ನಡೆಯುತ್ತಿರುವ ಕಿರಿದಾದ ರಸ್ತೆಗಳ ಅಗಲೀಕರಣ ವೇಳೆ ಕೆಲ ಪ್ರಭಾವಿಗಳ ಕಟ್ಟಡಗಳನ್ನು ಒಡೆಯದೇ ಉಳಿದವರ ಕಟ್ಟಡಗಳನ್ನು ತೆರವುಗೊಳಿಸಲಾಗ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ರಸ್ತೆ ಅಗಲೀಕರಣ
ನಗರದ ಹೃದಯ ಭಾಗದಲ್ಲಿ ಹಾದು ಹೋಗಿರುವ ಕಿರಿದಾಗಿದ್ದ ರಸ್ತೆಗಳ ಅಗಲೀಕರಣಕ್ಕೆ ಈಗಾಗಲೇ ಜಿಲ್ಲಾಡಳಿತ ಮುಂದಾಗಿದೆ. ನಗರದ ಚಳ್ಳಕೆರೆ ಗೇಟ್ ನಿಂದ ಆರಂಭವಾಗಿರುವ ರಸ್ತೆ ಅಗಲೀಕರಣ ಕಾಮಗಾರಿ ಇದೀಗ ಪ್ರವಾಸಿ ಮಂದಿರ ತನಕ ತಲುಪಿದೆ.
ಆದರೆ, ರಸ್ತೆ ಅಗಲೀಕರಣ ವೇಳೆ ಕೆಲ ಪ್ರಭಾವಿಗಳಿಗೆ ಸೇರಿದ ಕಟ್ಟಡಗಳನ್ನು ಒಡೆದು ಹಾಕದೆ ಹಾಗೇ ಬಿಟ್ಟು, ಉಳಿದವರ ಅಂದರೆ ಬಡವರ ಕಟ್ಟಡಗಳನ್ನು ತೆರವುಗೊಳಿಸುತ್ತಿದ್ದಾರೆ ಎಂದು ಆರೋಪಿಸಿ ಚಿತ್ರದುರ್ಗ ನಗರದ ಕೆಳಗೋಟೆ ಬಡಾವಣೆ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ.