ಚಿತ್ರದುರ್ಗ:ಯುಪಿಎಸ್ಸಿ ಫಲಿತಾಂಶ ಹೊರ ಬಿದ್ದಿದ್ದು, ಯುಪಿಎಸ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಡಾ.ಶ್ರೀ ಕಾಂತ್ ಎಂಬ ಯುವಕ ದೇಶಕ್ಕೆ 680 ನೇ ರ‍್ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
UPSC ಪರೀಕ್ಷೆಯಲ್ಲಿ 680 ನೇ ರ‍್ಯಾಂಕ್ ಪಡೆದ ಕೋಟೆನಾಡಿನ ಯುವಕ - undefined
ಧರ್ಮೇಶ್ ಹಾಗೂ ಸುವರ್ಣ ದಂಪತಿಯ ಮಗನಾದ ಶ್ರೀಕಾಂತ್ ಅವರು ಯುಪಿಎಸ್ಸಿ ಪರೀಕ್ಷೆಯಲ್ಲಿ 680 ನೇ ರ‍್ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಡಾ.ಶ್ರೀ ಕಾಂತ್
ಧರ್ಮೇಶ್ ಹಾಗೂ ಸುವರ್ಣ ದಂಪತಿಯ ಮಗನಾದ ಶ್ರೀಕಾಂತ್ ಎಂಬಿಬಿಎಸ್ ಪದವಿ ಪಡೆಯುವ ಮೂಲಕ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಯುಪಿಎಸ್ಸಿ ಫಲಿತಾಂಶದಲ್ಲಿ ಅವರು 680 ನೇ ರ‍್ಯಾಂಕ್ ಪಡೆಯುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿರುವುದು, ಹೆತ್ತವರಿಗೆ ಸಂತೋಷ ತಂದಿದೆ. ಈ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.
ರ‍್ಯಾಂಕ್ ಪಡೆದ ಶ್ರೀಕಾಂತ್ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದ್ದು, ಇದಕ್ಕೆಲ್ಲ ನನ್ನ ಪರಿಶ್ರಮ, ಕುಟುಂಬದ ಸಹಕಾರವೇ ಮುಖ್ಯ ಕಾರಣವಾಗಿದೆ ಎನ್ನುತ್ತಾರೆ ಶ್ರೀಕಾಂತ್.