ಚಿತ್ರದುರ್ಗ :ಕದ್ದ ವಸ್ತುಗಳನ್ನೇ ತಮ್ಮದು ಎಂದು ಹೇಳುವ ಈ ಕಾಲದಲ್ಲಿ ಇಲ್ಲೊಬ್ಬ ವ್ಯಕ್ತಿ ರಸ್ತೆಯಲ್ಲಿ ಬಿದ್ದಿದ್ದ ಸುಮಾರು 45 ಸಾವಿರ ರೂ.ಬೆಲೆ ಬಾಳುವ ಚಿನ್ನದ ಸರವನ್ನು ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ರಸ್ತೆಯಲ್ಲಿ ಬಿದ್ದಿದ್ದ ಚಿನ್ನದ ಸರವನ್ನು ಪೊಲೀಸರಿಗೆ ಒಪ್ಪಿಸಿದ ವ್ಯಕ್ತಿ.. ಪ್ರಮಾಣಿಕತೆಗೆ ಖಾಕಿ ಗೌರವ.. - Chitradurga latest update news
ಜಿಲ್ಲಾ ಎಸ್ಪಿ ರಾಧಿಕಾ ಅವರು, ರಂಗನಾಥ್ ಅವರ ಪ್ರಮಾಣಿಕತೆಯನ್ನ ಪ್ರಶಂಸಿ, ಸನ್ಮಾನ ಮಾಡಿದ್ದಾರೆ. ಅಲ್ಲದೇ ಚಿನ್ನದ ಸರ ಯಾರದ್ದೋ ಅವರಿಗೇ ಅದನ್ನ ವಾಪಸ್ ನೀಡೋದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ..
ಪ್ರಾಮಾಣಿಕತೆ ಮೆರೆದ ವ್ಯಕ್ತಿ
ರಂಗನಾಥ್ ಎಂಬುವರೇ ಚಿನ್ನದ ಸರ ಪೊಲೀಸರಿಗೊಪ್ಪಿಸಿದ ವ್ಯಕ್ತಿ. ಮೊಬೈಲ್ ಶಾಪ್ನಲ್ಲಿ ಕೆಲಸ ಮಾಡುವ ರಂಗನಾಥ್ ಅವರಿಗೆ, ಚಿತ್ರದುರ್ಗ ಜಿಲ್ಲೆ ಹೊಸದುರ್ಗ ನಗರದ ಮುಖ್ಯ ರಸ್ತೆಯಲ್ಲಿ ಹೋಗುವಾಗ ಚಿನ್ನದ ಸರ ಸಿಕ್ಕಿದೆ. ಬಳಿಕ ಅದನ್ನು ಅವರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಜಿಲ್ಲಾ ಎಸ್ಪಿ ರಾಧಿಕಾ ಅವರು, ರಂಗನಾಥ್ ಅವರ ಪ್ರಮಾಣಿಕತೆಯನ್ನ ಪ್ರಶಂಸಿ, ಸನ್ಮಾನ ಮಾಡಿದ್ದಾರೆ. ಅಲ್ಲದೇ ಚಿನ್ನದ ಸರ ಯಾರದ್ದೋ ಅವರಿಗೇ ಅದನ್ನ ವಾಪಸ್ ನೀಡೋದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.