ಚಿತ್ರದುರ್ಗ:ಶಾಲೆ ಪಕ್ಕದಲ್ಲಿ ಗಬ್ಬು ನಾರುತ್ತಿದ್ದ ಚರಂಡಿಯನ್ನು ಸ್ವಚ್ಛಗೊಳಿಸದ ಗ್ರಾಮ ಪಂಚಾಯಿತಿ ವಿರುದ್ಧ ಶಾಲೆಯ ಮಕ್ಕಳು ಪ್ರತಿಭಟಿಸಿ ಬಾಗಿಲು ಮುಚ್ಚಿಸಿರುವ ಘಟನೆ ಜಿಲ್ಲೆಯ ಹಿರೇಗುಂಟನೂರು ಗ್ರಾಮದಲ್ಲಿ ನಡೆದಿದೆ.
ಚರಂಡಿ ವಾಸನೆಯಿಂದ ಬೇಸತ್ತ ವಿದ್ಯಾರ್ಥಿಗಳು ಏನು ಮಾಡಿದ್ರು ಗೊತ್ತಾ? - ಅಧಿಕಾರಿಗಳಿಗೆ ಮನವಿ
ಶಾಲೆ ಪಕ್ಕದಲ್ಲಿ ಗಬ್ಬು ನಾರುತ್ತಿದ್ದ ಚರಂಡಿಯನ್ನು ಸ್ವಚ್ಛಗೊಳಿಸದ ಗ್ರಾಮ ಪಂಚಾಯಿತಿ ವಿರುದ್ಧ ಶಾಲೆಯ ಮಕ್ಕಳು ಪ್ರತಿಭಟಿಸಿ ಬಾಗಿಲು ಮುಚ್ಚಿಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರೇಗುಂಟನೂರು ಗ್ರಾಮದಲ್ಲಿ ನಡೆದಿದೆ.
![ಚರಂಡಿ ವಾಸನೆಯಿಂದ ಬೇಸತ್ತ ವಿದ್ಯಾರ್ಥಿಗಳು ಏನು ಮಾಡಿದ್ರು ಗೊತ್ತಾ?](https://etvbharatimages.akamaized.net/etvbharat/prod-images/768-512-4305490-thumbnail-3x2-sanju.jpg)
ಚರಂಡಿ ವಾಸನೆಯಿಂದ ಬೇಸತ್ತ ವಿಧ್ಯಾರ್ಥಿಗಳು ಏನೂ ಮಾಡಿದ್ರು ಗೊತ್ತಾ..?
ಚರಂಡಿ ವಾಸನೆಯಿಂದ ಬೇಸತ್ತ ವಿದ್ಯಾರ್ಥಿಗಳು ಏನು ಮಾಡಿದ್ರು ಗೊತ್ತಾ?
ತಾಲೂಕಿನ ಪಂಚಾಯ್ತಿ ವ್ಯಾಪ್ತಿಯ ತಿರುಮಲಾಪುರ ಗ್ರಾಮದ ಸರ್ಕಾರಿ ಶಾಲೆಯ ಪಕ್ಕದಲ್ಲಿರುವ ಊರಿನ ಚರಂಡಿ ತುಂಬಿ ಅನೇಕ ತಿಂಗಳು ಕಳೆದರೂ ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿರಲಿಲ್ಲ. ಚರಂಡಿಯ ವಾಸನೆ ತಾಳಲಾರದೆ ಮಕ್ಕಳು ಚರಂಡಿ ಸ್ವಚ್ಛಗೊಳಿಸುವಂತೆ ಕಳೆದ ಗ್ರಾಮ ಸಭೆ ಸೇರಿದಂತೆ ಅನೇಕ ಬಾರಿ ಗ್ರಾಮ ಪಂಚಾಯ್ತಿಯ ಅಧ್ಯಕ್ಷರಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಆದರೆ ಇದಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದರಿಂದ ಆಕ್ರೋಶಗೊಂಡು ಪಂಚಾಯಿತಿ ಬಾಗಿಲು ಮುಚ್ಚುವ ಮೂಲಕ ಪ್ರತಿಭಟನೆ ನಡೆಸಿದ್ದು, ನಂತರ ಚಂರಡಿಯನ್ನು ಸ್ವಚ್ಛಗೊಳಿಸುವಂತೆ ತಾಕೀತು ಮಾಡಿದ್ದಾರೆ.