ಕರ್ನಾಟಕ

karnataka

ETV Bharat / state

ದೆವ್ವ ಬಿಡಿಸುವ ನೆಪದಲ್ಲಿ ಮಗುವಿನ ಕೊಲೆ ಆರೋಪ! - ಚಿತ್ರದುರ್ಗದ ಅಪರಾಧ ಪ್ರಕರಣ

ದೆವ್ವ ಬಿಡಿಸುವುದಾಗಿ ಹೇಳಿ 2 ವರ್ಷದ ಮಗುವಿಗೆ ಎಕ್ಕೆಗಿಡದ ಬೆತ್ತದಿಂದ ಹೊಡೆದು ಕೊಲೆ ಮಾಡಿರುವ ಆರೋಪ ಪ್ರಕರಣ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಪೂರ್ಣಿಕಾ
ಪೂರ್ಣಿಕಾ

By

Published : Sep 28, 2020, 11:40 AM IST

ಚಿತ್ರದುರ್ಗ: ದೆವ್ವ ಬಿಡಿಸುವ ನೆಪದಲ್ಲಿ ಎರಡು ವರ್ಷದ ಹೆಣ್ಣು ಮಗುವಿಗೆ ಎಕ್ಕೆಗಿಡದ ಬೆತ್ತದಿಂದ ಥಳಿಸಿ ಕೊಲೆಗೈದಿರುವ ಆರೋಪ ಪ್ರಕರಣ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಜ್ಜಿ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪ್ರವೀಣ್ ಹಾಗೂ ಬೇಬಿ ದಂಪತಿಯ ಪುತ್ರಿ ಪೂರ್ಣಿಕಾ(2) ಪದೇ ಪದೇ ಬೆಚ್ಚಿ ಬೀಳುತ್ತಿದ್ದಳು. ಹೀಗಾಗಿ ಮಾಟಗಾರನ ಬಳಿ ಕರೆದುಕೊಂಡು ಹೋಗಿದ್ದ ಪೋಷಕರು ಮಗುವನ್ನು ಕಳೆದುಕೊಂಡು ಈಗ ಕಣ್ಣೀರು ಹಾಕುತ್ತಿದ್ದಾರೆ.

ಮಗು ಹತ್ಯೆಗೈದ ಆರೋಪಿ ಮಾಟಗಾರ

ಅಜ್ಜಿಕ್ಯಾತನಹಳ್ಳಿಯ‌ ರಾಕೇಶ್ ಎಂಬಾತ ತಾನು ಯಲ್ಲಮ್ಮನ ಆರಾಧಕ, ಮಂತ್ರವಾದಿ ಎಂದು ಹೇಳಿಕೊಂಡಿದ್ದ. ಮಗು ಪದೇ ಪದೇ ಬೆಚ್ಚಿ ಬೀಳೋದಕ್ಕೆ ದೆವ್ವ ಹಿಡಿದಿದೆ, ಬಿಡಿಸಬೇಕು ಎಂದು‌ ಮಗುವಿನ ಪೋಷಕರಿಗೆ ತಿಳಿಸಿದ್ದಾನೆ. ದೆವ್ವ ಬಿಡಿಸುವ ನೆಪದಲ್ಲಿ ಎಕ್ಕೆಗಿಡದ ಬೆತ್ತದಿಂದ ಮಗುವಿಗೆ ಹೊಡೆದಿದ್ದಾನೆ ಎನ್ನಲಾಗ್ತಿದೆ. ಹೀಗಾಗಿ ಮಗುವಿನ ದೇಹದ ತುಂಬಾ ಬೆತ್ತದ ಗಾಯ, ಬಾಸುಂಡೆ ಕಲೆ ಕಂಡು ಬಂದಿದೆ. ಮಾಟಗಾರ ರಾಕೇಶ್ ಹೊಡೆತಕ್ಕೆ ಸ್ಥಳದಲ್ಲೇ‌ ಮಗು ಕುಸಿದುಬಿದ್ದು ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಆರೋಪಿ ಮಾಟಗಾರ ರಾಕೇಶ್

ಈ ಸಂಬಂಧ ಚಿಕ್ಕಜಾಜೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details