ಚಿತ್ರದುರ್ಗ:ಮೂಕ ಪ್ರಾಣಿಗಳು ಹಾಗೂ ಮನುಷ್ಯನ ಮಧ್ಯೆ ಸಂಘರ್ಷ ನಡೆಯುತ್ತಿದ್ದು, ಅಷ್ಟೇ ಪ್ರಾಣಿಗಳು ಸಾವನ್ನಪ್ಪುತ್ತಿವೆ. ಇನ್ನೂ ಕೆಲ ದುಷ್ಕರ್ಮಿಗಳು ಹಣದಾಸೆಗೆ ಕಾಡು ಪ್ರಾಣಿಗಳನ್ನು ಸಾಯಿಸಿರುವುದು ಜಿಲ್ಲೆಯಲ್ಲಿ ಬೆಳಕಿ ಬಂದಿದೆ.
ಚಿರತೆಗೆ ವಿಷವಿಕ್ಕಿ ಕೊಂದು, ಕಾಲು ಕೊಯ್ದುಕೊಂಡುಹೋದ ದುಷ್ಕರ್ಮಿಗಳು - ಆಹಾರದಲ್ಲಿ ವಿಷ ಬೆರೆಸಿ ಚಿರತೆ ಹತ್ಯೆ
ಚಿರತೆಯೊಂದಕ್ಕೆ ಆಹಾರದಲ್ಲಿ ವಿಷ ಬೆರೆಸಿ ಹತ್ಯೆ ಮಾಡಿರುವ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣ ಬಳಿಯ ಪಾಳೇಗಾರರ ಗುಡ್ಡದಲ್ಲಿ ನಡೆದಿದೆ.
![ಚಿರತೆಗೆ ವಿಷವಿಕ್ಕಿ ಕೊಂದು, ಕಾಲು ಕೊಯ್ದುಕೊಂಡುಹೋದ ದುಷ್ಕರ್ಮಿಗಳು cheetha-dead-by-poison-in-chitradurga](https://etvbharatimages.akamaized.net/etvbharat/prod-images/768-512-6051066-thumbnail-3x2-sanju.jpg)
ಚಿರತೆಗೆ ವಿಷವಿಕ್ಕಿ ಹತ್ಯೆ
ಹೌದು, ಚಿರತೆಯೊಂದಕ್ಕೆ ಆಹಾರದಲ್ಲಿ ವಿಷ ಬೆರೆಸಿ ಹತ್ಯೆ ಮಾಡಿರುವ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣ ಬಳಿಯ ಪಾಳೇಗಾರರ ಗುಡ್ಡದಲ್ಲಿ ನಡೆದಿದೆ.
ಮೊಳಕಾಲ್ಮೂರು ಪಟ್ಟಣದ ಬಳಿಯ ಪಾಳೇಗಾರರ ಗುಡ್ಡದಲ್ಲಿ ಚಿರತೆ ಶವಪತ್ತೆಯಾಗಿದ್ದು, ದುಷ್ಕರ್ಮಿಗಳು ವಿಷವಿಕ್ಕಿ ಸಾಯಿಸಿರುವ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಚಿರತೆಯ ಸಾವಿನ ಬಳಿಕ ದುಷ್ಕರ್ಮಿಗಳು 3 ಕಾಲು ತುಂಡರಿಸಿ ಕದ್ದು ಪರಾರಿಯಾಗಿದ್ದಾರೆ. ಮರು ದಿನ ಬೆಳಗ್ಗೆ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ.