ಕರ್ನಾಟಕ

karnataka

ETV Bharat / state

ಟ್ರ್ಯಾಕ್ಟರ್ ಕೊಡಿಸುವುದಾಗಿ ಹೇಳಿ ರೈತನಿಗೆ ವಂಚಿಸಿದ ಖದೀಮರು ಅಂದರ್ - ಚಿತ್ರದುರ್ಗ ಅಪರಾದ ಸುದ್ದಿ

ಟ್ರ್ಯಾಕ್ಟರ್ ಕೊಡಿಸುವುದಾಗಿ ನಂಬಿಸಿ, ನಕಲಿ ದಾಖಲೆ ಸೃಷ್ಟಿಸಿ ರೈತನೋರ್ವನ ಜಮೀನಿನ ಮೇಲೆ ಸಾಲ ಪಡೆದು ಹಣ ಲಪಟಾಯಿಸಿದ್ದ ಆರು ಜನ ಖದೀಮರಿಗೆ ಚಿತ್ರದುರ್ಗ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.

Cheaters gets imprisonment punishment
ಚಿತ್ರದುರ್ಗ ನ್ಯಾಯಾಲಯ

By

Published : Jan 29, 2020, 7:42 PM IST

ಚಿತ್ರದುರ್ಗ: ಟ್ರ್ಯಾಕ್ಟರ್ ಕೊಡಿಸುವುದಾಗಿ ನಂಬಿಸಿ, ರೈತನಿಗೆ ವಂಚಿಸಿದ್ದ ಆರು ಜನ ಖದೀಮರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಚಿತ್ರದುರ್ಗ ತಾಲೂಕಿನ ಕುಂಚಿಗನಾಳ್ ಗ್ರಾಮದ ನಿವಾಸಿ ನಿಂಗಪ್ಪ ವಂಚನೆಗೊಳಗಾದವರು. ಹೊಸದಾಗಿ ಬಂದಿರುವ ಪ್ರೀತ್ ಟ್ರ್ಯಾಕ್ಟರ್ ಕಂಪನಿ‌ ಚೆನ್ನಾಗಿದೆ ಎಂದು ಹೇಳಿ, ಟ್ರ್ಯಾಕ್ಟರ್ ಖರೀದಿಸಲು ಎಸ್​ಬಿಐ ಬ್ಯಾಂಕ್ ನಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿದ್ದರು. ಬಳಿಕ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆದು ವಂಚಿಸಿ ಎಸ್​ಬಿಐ ಬ್ಯಾಂಕ್​ನಲ್ಲಿ ಮಾರ್ಟ್ಗೇಜ್ ಮಾಡಿಸಿ ದೂರುದಾರ ನಿಂಗಪ್ಪನ ಹೆಸರಿನಲ್ಲಿ ಬ್ಯಾಂಕಿನಲ್ಲಿ 5,96,500 ಸಾಲ ಪಡೆದು, ಟ್ರ್ಯಾಕ್ಟರ್ ಕೊಡಿಸದೆ ವಂಚಿಸಿದ್ದರು.

ಮೋಸ ಹೋದ ನಿಂಗಪ್ಪ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಬಳಿಕ ವಿಚಾರಣೆ ನಡೆಸಿದ ಪೊಲೀಸರು ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಆರೋಪ ಸಾಬೀತಾದ ಹಿನ್ನಲೆ ತಪ್ಪಿತಸ್ಥರಾದ ರವಿ, ಮಂಜುನಾಥ, ಮಹೇಶ್, ರಾಜೇಂದ್ರ, ಶಾಂತವೀರಯ್ಯ, ಬಸವರಾಜಪ್ಪ ಎಂಬುವರಿಗೆ ಚಿತ್ರದುರ್ಗದ ಎರಡನೇಯ ಹಿರಿಯ ಸಿಜೆ, ಜೆಎಂಎಫ್​ಸಿ ನ್ಯಾಯಾಲಯದ ನ್ಯಾಯಾಧೀಶ ಹೆಚ್ಎಂ ದೇವರಾಜು ಅವರು ಖದೀಮರಿಗೆ ಮೂರು ವರ್ಷ ಸಜೆ, ದಂಡ ಸಹ ವಿಧಿಸಿದ್ದಾರೆ. ಒಟ್ಟು 1,50,000 ದಂಡದ ಹಣದಲ್ಲಿ ರೈತ ನಿಂಗಪ್ಪನಿಗೆ ಅರ್ಧ ಭಾಗ ಪರಿಹಾರ‌ ನೀಡಬೇಕೆಂದೂ ಆದೇಶ ಹೊರಡಿಸಿದ್ದಾರೆ.

ABOUT THE AUTHOR

...view details