ಕರ್ನಾಟಕ

karnataka

ETV Bharat / state

ಸಂತ್ರಸ್ತರಿಗೆ ರಾಜ್ಯದ ‌ಇತಿಹಾಸದಲ್ಲೇ ಹೆಚ್ಚು ಪರಿಹಾರ ನೀಡಲಾಗುತ್ತಿದೆ: ಜಗದೀಶ್ ಶೆಟ್ಟರ್ - Central Government shortly give Flood relief Jagadeesh Shettar said

ನೆರೆ ಸಂತ್ರಸ್ತರಿಗೆ ಈಗಾಗಲೇ ರಾಜ್ಯ ಸರ್ಕಾರ‌ದಿಂದ ಅಗತ್ಯ ಪರಿಹಾರ ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರ ಕೂಡ ಶೀಘ್ರದಲ್ಲೇ ಪರಿಹಾರ ನೀಡಲಿದೆ ಎಂದು ಬೃಹತ್​ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಸಚಿವ ಜಗದೀಶ್ ಶೆಟ್ಟರ್

By

Published : Oct 4, 2019, 8:40 PM IST

ಚಿತ್ರದುರ್ಗ: ನೆರೆ ಸಂತ್ರಸ್ತರಿಗೆ ಈಗಾಗಲೇ ರಾಜ್ಯ ಸರ್ಕಾರ‌ದಿಂದ ಅಗತ್ಯ ಪರಿಹಾರ ನೀಡಲಾಗುತ್ತಿದ್ದು, ಕೇಂದ್ರ ಸರ್ಕಾರ ಕೂಡ ಶೀಘ್ರದಲ್ಲೇ ಪರಿಹಾರ ನೀಡಲಿದೆ ಎಂದು ಬೃಹತ್​ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಸಚಿವ ಜಗದೀಶ್ ಶೆಟ್ಟರ್ ಹೇಳಿಕೆ

ಮುರುಘಾ ಮಠಕ್ಕೆ ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂತ್ರಸ್ತರಿಗೆ ರಾಜ್ಯದ ‌ಇತಿಹಾಸದಲ್ಲೇ ಹೆಚ್ಚು ಪರಿಹಾರ ನೀಡಲಾಗುತ್ತಿದೆ. ಹತ್ತು ಸಾವಿರ ಹಣ ಸಂತ್ರಸ್ತರ ಖಾತೆಗೆ ಜಮಾ ಆಗಿದೆ. ನೆರೆಯಲ್ಲಿ ಶೇ.25 ರಷ್ಟು ಭಾಗ ನಷ್ಟವಾದ ಮನೆ ಮಾಲೀಕರ ಉಳಿತಾಯ ಖಾತೆಗೆ 25,000 ರೂ. ಜಮಾ ಮಾಡಲಾಗಿದೆ. ಎನ್​ಡಿಆರ್​ಎಫ್ ನಿಯಮಾನುಸಾರ ಪರಿಹಾರ ನೀಡಲು ಹಣವಿಲ್ಲ ಅಂತ ಸಿಎಂ ಹೇಳಿದ್ದಾರೆ ಎಂದು ತಿಳಿಸಿದರು.

ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ಹೆಚ್ಚಿನ ನಿರೀಕ್ಷೆ ಕೇಂದ್ರ ಸರ್ಕಾರದ ಮೇಲಿದೆ. ಅದು ಕೂಡ ಹಬ್ಬದ ಬಳಿಕ ಬರಲಿದೆ ಎಂದರು.

ABOUT THE AUTHOR

...view details