ಚಿತ್ರದುರ್ಗ:ನಗರದ ರೈಲು ನಿಲ್ದಾಣದಲ್ಲಿ ಆರ್ಪಿಎಫ್ ಎಎಸ್ಐ ಗುರುಸ್ವಾಮಿ ಟೀ ಸ್ಟಾಲ್ ವ್ಯಾಪಾರಿಯಿಂದ ಲಂಚ ಪಡೆಯುತ್ತಿದ್ದ ವೇಳೆ ಸಿಬಿಐ ಬಲೆಗೆ ಬಿದ್ದಿದ್ದಾರೆ.
ಸಿಬಿಐ ಡಿವೈಎಸ್ಪಿ ರಾಜು ನೇತೃತ್ವದ ತಂಡದಿಂದ ದಾಳಿ ನಡೆಸಿ ಟೀ ಸ್ಟಾಲ್ ವ್ಯಾಪಾರಿಯಿಂದ ಲಂಚ ಸ್ವೀಕರಿಸುತ್ತಿದ್ದ ಆರ್ಪಿಎಫ್ ಎಎಸ್ಐ ಗುರುಸ್ವಾಮಿಯನ್ನು ಹಣದ ಸಮೇತ ಅಧಿಕಾರಿಗಳು ಬಂಧಿಸಿದ್ದಾರೆ. ಸದ್ಯ ಗುರುಸ್ವಾಮಿಯನ್ನು ವಿಚಾರಣೆಗೊಳಪಡಿಸಲಾಗಿದೆ.