ಚಿತ್ರದುರ್ಗ :ಇಲ್ಲಿ ನಡೆಯುವ ಒಂದು ವಾರಗಳ ಶರಣ ಸಂಸ್ಕೃತಿ ಉತ್ಸವಕ್ಕೆ ಜಾನುವಾರು ಪ್ರದರ್ಶನ ಮೆರಗು ಮೂಡಿಸಿದೆ. ಇಂದು ಮುರುಘಾ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಜಾನುವಾರು ಪ್ರದರ್ಶನಕ್ಕೆ ಶ್ರೀ ಶಿವಮೂರ್ತಿ ಮುರುಘಾ ಶರಣರು ಕೂಡ ಸಾಕ್ಷಿಯಾದರು.
ಶರಣ ಸಂಸ್ಕೃತಿ ಉತ್ಸವಕ್ಕೆ ಮೆರಗು ತಂದ ಜಾನುವಾರು ಪ್ರದರ್ಶನ - chitradurga news
ಮುರುಘಾ ಮಠದ ಆವರಣದಲ್ಲಿ ಶರಣಸಂಸ್ಕೃತಿ ಉತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಜಾನುವಾರು ಪ್ರದರ್ಶನಕ್ಕೆ ಕೃಷಿ ಸಚಿವ ಬಿಸಿ ಪಾಟೀಲ ಚಾಲನೆ ನೀಡಿದರು.
ಶರಣ ಸಂಸ್ಕೃತಿ ಉತ್ಸವಕ್ಕೆ ಮೆರಗು ತಂದ ಜಾನುವಾರು ಪ್ರದರ್ಶನ
ಮಠದ ಆವರಣದಲ್ಲಿ ಶರಣಸಂಸ್ಕೃತಿ ಉತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಜಾನುವಾರು ಪ್ರದರ್ಶನಕ್ಕೆ ಕೃಷಿ ಸಚಿವ ಬಿಸಿ ಪಾಟೀಲ ಚಾಲನೆ ನೀಡಿದರು. ಈ ಪ್ರದರ್ಶನದಲ್ಲಿ ಹಲವು ಜಾನುವಾರುಗಳು ಆಗಮಿಸಿದ್ದರಿಂದ ಅವುಗಳನ್ನು ಕಣ್ತುಂಬಿಕೊಳ್ಳಲು ನೂರಾರು ಜನ ಆಗಮಿಸಿದ್ದರು.
ಫಾರಮ್, ಸೀಮೆ ಹಸು, ಕೋಣ, ಎಮ್ಮೆ, ಜವಾರಿ ಹಸು ಇನ್ನು ಮುಂತಾದ ಜಾನುವಾರುಗಳನ್ನು ರೈತರು ಶರಣ ಸಂಸ್ಕೃತಿ ಉತ್ಸವದ ಪ್ರದರ್ಶನಕ್ಕಾಗಿ ಕರೆತಂದಿದ್ದರು. ಪ್ರದರ್ಶನಕ್ಕೆ ತಂದಿದ್ದ ಜಾನುವಾರುಗಳಲ್ಲಿ ಉತ್ತಮವಾದುದನ್ನು ಗುರುತಿಸಿ ಪ್ರಶಸ್ತಿ ನೀಡಲಾಯಿತು.