ಚಿತ್ರದುರ್ಗ: ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ ಕೈ, ಕಮಲ ಕಲಿಗಳ ನಡುವೆ ಜಿದ್ದಾಜಿದ್ದಿನ ಸೆಣಸಾಟ ಏರ್ಪಟ್ಟಿದೆ. ಅದರೆ ಲೋಕ ಸಮರದಲ್ಲಿ ಮತ ಬೇಟೆಯಾಡಲು ಅಭ್ಯರ್ಥಿಗಳು ಭದ್ರೆಯನ್ನೇ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ.
ಬರದನಾಡು ಎಂದೇ ಹಣೆ ಪಟ್ಟಿ ಕಟ್ಟಿಕೊಂಡಿರುವ ಚಿತ್ರದುರ್ಗದಲ್ಲಿ ಚುನಾವಣೆ ಕಾವು ಏರುತ್ತಲೇ ಇದೆ. ಲೋಕಸಭಾ ಕ್ಷೇತ್ರದ ಮತದಾನಕ್ಕೆ ದಿನಾಂಕ ನಿಗದಿಯಾದ ಬೆನ್ನಲ್ಲೆ ಕೈ- ಕಮಲ ಅಭ್ಯರ್ಥಿಗಳು ಭದ್ರಾ ಮೇಲ್ದಂಡೆ ಯೋಜನೆಯನ್ನ ಅಸ್ತ್ರವಾಗಿಸಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಯಾವುದೇ ನೀರಾವರಿ ಮೂಲಗಳಿಲ್ಲದ ನಾಡಿನಲ್ಲಿ ಈ ಭಾಗದ ಜನರು ಭದ್ರಾ ಯೋಜನೆಗಾಗಿ ಹೋರಾಟ ನಡೆಸಿ ಯೋಜನೆಯನ್ನ ಗಿಟ್ಟಿಸಿಕೊಂಡಿದ್ದರು. ಸರ್ಕಾರಗಳಿಂದ ಕೇವಲ ಎರಡು ಸಾವಿರ ಕೋಟಿ ಅನುದಾನ ಮಾತ್ರ ಈ ಯೋಜನೆಗಾಗಿ ಖರ್ಚಾಗಿದ್ದು, ಭದ್ರಾ ಯೋಜನೆ ಕಾಮಗಾರಿ ಮಾತ್ರ ಇನ್ನು ಪೂರ್ಣವಾಗದೆ ಮಂದಗತಿಯಲ್ಲಿ ಸಾಗತೊಡಗಿದೆ.