ಚಿತ್ರದುರ್ಗ:ಸಂಪುಟ ಪುನಾರಚನೆ ಎರಡು ಮೂರು ದಿನಗಳಲ್ಲಿ ಆಗುವ ವಿಶ್ವಾಸವಿದ್ದು, ಸಾಧ್ಯವಾದ್ರೆ ಹೈಕಮಾಂಡ್ ಜೊತೆ ಚರ್ಚಿಸುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ಪುನಾರಚನೆ ಬಗ್ಗೆ ಮೂಡಿದ್ದ ಗೊಂದಲ ಕುರಿತು ಸ್ಪಷ್ಟನೆ ನೀಡಿದ್ರು.
ಸಂಪುಟ ಪುನಾರಚನೆ ಎರಡು -ಮೂರು ದಿನಗಳಲ್ಲಿ ಆಗುವ ವಿಶ್ವಾಸವಿದೆ: ಸಿಎಂ ಬಿಎಸ್ವೈ - cabinet expansion latest updates
ಸಂಪುಟ ಪುನಾರಚನೆ ಎರಡು ಮೂರು ದಿನಗಳಲ್ಲಿ ಆಗುವ ವಿಶ್ವಾಸವಿದೆ ಎಂದು ಚಿತ್ರದುರ್ಗದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಆದಷ್ಟು ಬೇಗ ಸಚಿವ ಸಂಪುಟ ಪುನಾರಚನೆ ಬಗ್ಗೆ ಮೂಡಿರುವ ಗೊಂದಲದ ಬಗ್ಗೆ ಬೇಗ ಕ್ಲಿಯರ್ ಮಾಡಿಕೊಡುವಂತೆ ಹೈಕಮಾಂಡ್ಗೆ ಕೇಳುತ್ತೇನೆ. ಇದು ಬಿಟ್ರೇ ಬೇರೆ ಯಾವುದೇ ಗೊಂದಲವಿಲ್ಲ, ಎಲ್ಲವೂ ಸರಿ ಹೋಗುತ್ತೆ ಎಂದ್ರು.
ಸ್ಥಳೀಯ ಶಾಸಕ ತಿಪ್ಪಾರೆಡ್ಡಿಗೆ ಸಚಿವ ಸ್ಥಾನ ನೀಡುವ ವಿಚಾರ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತೋ ನೋಡೋಣ ಎಂದು ಜಾರಿಕೊಂಡರು. ಬಳಿಕ ಮುರುಘಾ ಮಠದ ಆವರಣದಲ್ಲಿ ನಿರ್ಮಾಣ ಆಗಿರುವ ಐತಿಹಾಸಿಕ ವಸ್ತು ಸಂಗ್ರಹಾಲಯವನ್ನು ಉದ್ಘಾಟನೆ ಮಾಡಲಾಯಿತು.