ಕರ್ನಾಟಕ

karnataka

ETV Bharat / state

ಮೆಡಿಕಲ್ ಕಿಟ್​​ಗಾಗಿ ಕೈ ಪಕ್ಷದ ಕಾರ್ಯಕ್ರಮದಲ್ಲಿ ಗದ್ದಲ: ಶಾಸಕ ರಘುಮೂರ್ತಿ ಗರಂ - Chitradurga

ಮೆಡಿಕಲ್ ಕಿಟ್​​ಗಾಗಿ ನಗರಸಭೆಯ ಮಾಜಿ ಉಪಾಧ್ಯಕ್ಷ ಜಬ್ಬರ್ ಹಾಗೂ ಕೈ ಪಕ್ಷದ ಜಿಲ್ಲಾಧ್ಯಕ್ಷ ತಾಜ್ ಪೀರ್ ಸೇರಿದಂತೆ ಚಳ್ಳಕೆರೆ ಶಾಸಕ ರಘುಮೂರ್ತಿಯವರ ನಡುವೆ ವಾಗ್ವಾದ ನಡೆಯಿತು.

Bustle in the Health Palm Program
ಮೆಡಿಕಲ್ ಕಿಟ್​​ಗಾಗಿ ಕೈ ಪಕ್ಷದ ಕಾರ್ಯಕ್ರಮದಲ್ಲಿ ಗದ್ದಲ

By

Published : Sep 3, 2020, 2:36 PM IST

ಚಿತ್ರದುರ್ಗ: ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು ಹಮ್ಮಿಕೊಂಡಿದ್ದ ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಗದ್ದಲ ಉಂಟಾಗಿದೆ.

ಆರೋಗ್ಯ ಹಸ್ತ ಕಾರ್ಯಕ್ರಮದಲ್ಲಿ ಕೋಲಾಹಲ

ನಗರದ ಉಮಾಪತಿ ಸಮುದಾಯ ಭವನದಲ್ಲಿ ಮಾಜಿ ಸಂಸದ ಚಂದ್ರಪ್ಪ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೆಡಿಕಲ್ ಕಿಟ್​​ಗಾಗಿ ನಗರಸಭೆಯ ಮಾಜಿ ಉಪಾಧ್ಯಕ್ಷ ಜಬ್ಬರ್ ಹಾಗೂ ಕೈ ಪಕ್ಷದ ಜಿಲ್ಲಾಧ್ಯಕ್ಷ ತಾಜ್ ಪೀರ್ ಸೇರಿದಂತೆ ಚಳ್ಳಕೆರೆ ಶಾಸಕ ರಘುಮೂರ್ತಿಯವರ ನಡುವೆ ವಾಗ್ವಾದ ನಡೆದಿದೆ. ಜನರ ಆರೋಗ್ಯ ಪರಿಶೀಲಿಸಲು ರಾಜ್ಯ ಕೆಪಿಸಿಸಿಯಿಂದ ಕಳುಹಿಸಿಕೊಡಲಾಗಿರುವ ಆರೋಗ್ಯ ಹಸ್ತ ಕಿಟ್​​ಗಳನ್ನು ಜಿಲ್ಲಾ ಅಧ್ಯಕ್ಷರಾದ ತಾಜ್ ಪೀರ್ ಒಂದು ವಾರ್ಡಿನ ಕಿಟ್​​ಗಳನ್ನು ಮತ್ತೊಂದು ವಾರ್ಡಿಗೆ ನೀಡಿರುವುದನ್ನು ಖಂಡಿಸಿ ಜಬ್ಬರ್ ಗಲಾಟೆ ನಡೆಸಿದರು ಎನ್ನಲಾಗಿದೆ.

ಇನ್ನು ಶಾಂತಿ ಕಾಪಾಡುವಂತೆ ಮಧ್ಯಪ್ರವೇಶಿಸಿದ ಚಳ್ಳಕೆರೆ ಶಾಸಕ ರಘುಮೂರ್ತಿಯವರೊಂದಿಗೆ ವಾಗ್ವಾದಕ್ಕಿಳಿದ ಜಬ್ಬರ್ ಅವರನ್ನು ಇತರೆ ಕಾರ್ಯಕರ್ತರು ಸಮಾಧಾನಪಡಿಸಿದರು. ಪ್ರತಿಯೊಂದು ವಾರ್ಡ್​ನಲ್ಲಿ ಜನರ ಅರೋಗ್ಯ ತಪಾಸಣೆ ನಡೆಸಲು ಕಳುಹಿಸಿಕೊಟ್ಟಿರುವ ಕಿಟ್​​ಗಳಿಗಾಗಿ ಗಲಾಟೆ ನಡೆದಿದೆ ಎನ್ನಲಾಗಿದೆ.

ABOUT THE AUTHOR

...view details