ಚಿತ್ರದುರ್ಗ:ಸಂಚಾರ ನಿಯಮ ಉಲ್ಲಂಘಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಖಾಸಗಿ ಬಸ್ ಚಾಲಕನೊಬ್ಬ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಸಂಚಾರ ನಿಯಮ ಪ್ರಶ್ನಿಸಿದ್ದಕ್ಕೆ ಪೊಲೀಸ್ ಪೇದೆ ಮೇಲೆ ಖಾಸಗಿ ಬಸ್ ಚಾಲಕನಿಂದ ಹಲ್ಲೆ - ಪೇದೆ ಹಾಗೂ ಡ್ರೈವರ್ ನಡುವೆ ಜಗಳ ಸುದ್ದಿ
ಸಂಚಾರಿ ನಿಯಮ ಮೀರಿದ್ದನ್ನು ಪ್ರಶ್ನಿಸಿದ್ದಕ್ಕೆ ಖಾಸಗಿ ಬಸ್ ಚಾಲಕನೋರ್ವ ಪೊಲೀಸ್ ಪೇದೆ ಮೇಲೆ ಹಲ್ಲೆ ಮಾಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗ ನಗರದ ಗಾಂಧಿ ವೃತ್ತದಲ್ಲಿ ಈ ಘಟನೆ ನಡೆದಿದ್ದು, ಖಾಸಗಿ ಬಸ್ ಚಾಲಕ ಮಂಜುನಾಥ್ ವಿರುದ್ಧ ಪೊಲೀಸರು ಹಲ್ಲೆ ಆರೋಪ ಮಾಡಿದ್ದಾರೆ. ಸಂಚಾರ ನಿಯಮ ಮೀರಿದ್ದಕ್ಕಾಗಿ ಪ್ರಶ್ನಿಸಿದ ಪೇದೆ ಹಾಗೂ ಚಾಲಕನ ಮಧ್ಯೆ ವಾಗ್ವಾದ ಏರ್ಪಟ್ಟು ಬಳಿಕ ಅದು ಹಲ್ಲೆ ಮಾಡುವಷ್ಟರ ಮಟ್ಟಿಗೆ ತುಲುಪಿತ್ತು ಎಂದು ಸ್ಥಳೀಯರು ಹಾಗೂ ಪೊಲೀಸರು ತಿಳಿಸಿದ್ದಾರೆ.
ಸಂಚಾರ ಠಾಣೆಯ ಪೇದೆ ವಿಜಯ್ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದ ಬೆನ್ನಲ್ಲೇ ಟೌನ್ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಬಸ್ ಚಾಲಕನಿಗೆ ಹಿಗ್ಗಮುಗ್ಗಾ ಥಳಿಸುವ ಮೂಲಕ ಠಾಣೆಗೆ ಕರೆದೊಯ್ಯದಿದ್ದಾರೆ. ಚಿತ್ರದುರ್ಗ ಪೊಲೀಸ್ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.