ಕರ್ನಾಟಕ

karnataka

ETV Bharat / state

ದಕ್ಷಿಣೆ, ಪ್ರಸಾದ ಸ್ವೀಕಾರ ವಿಚಾರವಾಗಿ ಗಲಾಟೆ: ವ್ಯಕ್ತಿ ಮೇಲೆ ಮಚ್ಚಿನಿಂದ ಹಲ್ಲೆ - ಚಿತ್ರದುರ್ಗದಲ್ಲಿ ವ್ಯಕ್ತಿ ಮೇಲೆ ಮಚ್ಚಿನಿಂದ ಹಲ್ಲೆ

ಗೊಲ್ಲಾಳಮ್ಮ ದೇವಾಲಯದ ಪ್ರಸಾದ ಹಾಗೂ ದಕ್ಷಿಣೆ ಸ್ವೀಕಾರ ವಿಚಾರದಲ್ಲಿ ಪೂಜಾರಿಗಳು ಹಾಗೂ ದಾಸಯ್ಯಗಳ ಮಧ್ಯೆ ಮಾತಿನ ಚಕಮಕಿ‌ ನಡೆದಿದ್ದು, ಪೂಜಾರಿಗಳು ದಾಸಯ್ಯ ಶೇಖರ್ ಎಂಬುವರ ಮೇಲೆ ತೆಂಗಿನಕಾಯಿ ಕೊಚ್ಚುವ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ದಕ್ಷಿಣೆ, ಪ್ರಸಾದ ಸ್ವೀಕಾರ ವಿಚಾರವಾಗಿ ಗಲಾಟೆ
ದಕ್ಷಿಣೆ, ಪ್ರಸಾದ ಸ್ವೀಕಾರ ವಿಚಾರವಾಗಿ ಗಲಾಟೆ

By

Published : Mar 7, 2021, 10:32 AM IST

ಚಿತ್ರದುರ್ಗ: ದೇವಾಲಯದ ದಕ್ಷಿಣೆ ಹಾಗೂ ಪ್ರಸಾದ ಸ್ವೀಕಾರ ವಿಚಾರದಲ್ಲಿ ಓರ್ವ ವ್ಯಕ್ತಿಗೆ ಮಚ್ಚಿನಿಂದ ಹಲ್ಲೆ ನಡೆಸಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಹಿರಿಯೂರು ತಾಲೂಕಿನ ತೋಪಿನ ಗೊಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಚ್ಚಿನಿಂದ ಹಲ್ಲೆಗೊಳಗಾದ ವ್ಯಕ್ತಿ

ಗಾಯಾಳು ದಾಸಯ್ಯ ಶೇಖರ್ (34) ಗಂಭೀರವಾಗಿ ಗಾಯಗೊಂಡಿದ್ದಾನೆ. ಗೊಲ್ಲಾಳಮ್ಮ ದೇವಾಲಯದ ಪ್ರಸಾದ ಹಾಗೂ ದಕ್ಷಿಣೆ ಸ್ವೀಕಾರ ವಿಚಾರದಲ್ಲಿ ಪೂಜಾರಿಗಳು ಹಾಗೂ ದಾಸಯ್ಯಗಳ ಮಧ್ಯೆ ಮಾತಿನ ಚಕಮಕಿ‌ ನಡೆದಿದೆ ಎನ್ನಲಾಗುತ್ತಿದೆ. ಈ ವಾಗ್ವಾದ ತಾರಕಕ್ಕೇರಿದ್ದು, ಇಬ್ಬರು ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ. ಬಳಿಕ ಪೂಜಾರಿಗಳು ದಾಸಯ್ಯ ಶೇಖರ್ ಎಂಬುವನ ಮೇಲೆ ತೆಂಗಿನಕಾಯಿ ಕೊಚ್ಚುವ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:ಸಚಿವ ಕೆಟಿಆರ್​​ ಕಾರ್ಯದರ್ಶಿ ಎಂದೇಳಿಕೊಂಡು ಪ್ರತಿಷ್ಠಿತ ಸಂಸ್ಥೆಗಳಿಗೆ ಲಕ್ಷಗಟ್ಟಲೇ ವಂಚನೆ: ರಣಜಿ ಮಾಜಿ ಕ್ರಿಕೆಟಿಗ ಅರೆಸ್ಟ್​

ಗಂಭೀರವಾಗಿ ಗಾಯಗೊಂಡ ದಾಸಯ್ಯ ಶೇಖರ್ ಅವರನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ತಲೆ ಹಾಗೂ ಕೈ ಭಾಗಕ್ಕೆ ಗಂಭೀರವಾಗಿ ಗಾಯವಾಗಿದೆ. ಪೂಜಾರಿ ಭರತ್ ಪುಂಡಲಿಕ್ ಸೇರಿದಂತೆ ಇತರರ ವಿರುದ್ಧ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದ್ದು, ಅಬ್ಬಿನಹೊಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

For All Latest Updates

ABOUT THE AUTHOR

...view details