ಚಿತ್ರದುರ್ಗ: ಮದ್ಯ ಸೇವನೆ ಅಮಲಿನಲ್ಲಿ ನಡೆದ ಸಹೋದರರಿಬ್ಬರ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಆರ್.ಡಿ.ಕಾವಲ್‌ನಲ್ಲಿ ನಡೆದಿದೆ.
ಎಣ್ಣೆ ಅಮಲು: ಸಹೋದರನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ - Murder at RD Kaval of Holalkere Taluk
ಮದ್ಯ ಸೇವನೆ ಅಮಲಿನಲ್ಲಿ ಸಹೋದರರಿಬ್ಬರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಹಿರಿಯ ಸಹೋದರನ ಮೇಲೆ ಕಿರಿಯ ಸಹೋದರ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.
ಸಹೋದರನ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ
ಕುಮಾರ್ ನಾಯ್ಕ್ (33) ಕೊಲೆಯಾದ ದುರ್ದೈವಿ ಎಂದು ತಿಳಿದುಬಂದಿದೆ.
ಹೊಳಲ್ಕೆರೆ ತಾಲ್ಲೂಕಿನ ಆರ್.ಡಿ ಕಾವಲ್‌ನಲ್ಲಿ ಈ ಘಟನೆ ನಡೆದಿದೆ. ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಕೊಲೆ ಮಾಡಲಾಗಿದ್ದು, ಒಡಹುಟ್ಟಿದ ಸಹೋದರನನ್ನು ಕೊಲೆಗೈದ ಆರೋಪಿ ಸಂತೋಷ್ (30) ನನ್ನುಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊಳಲ್ಕೆರೆ ಠಾಣೆಯ ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Last Updated : Dec 31, 2019, 12:38 PM IST