ಚಿತ್ರದುರ್ಗ:ಅಕ್ಕನ ನಡತೆಯನ್ನು ಅನುಮಾನಿಸಿದ ಬಾವನ ಕಿವಿಯನ್ನು ಬಾಮೈದ ಕತ್ತರಿಸಿದ ವಿಚಿತ್ರ ಘಟನೆ ಜಿಲ್ಲೆಯ ಚಳ್ಳಕೆರೆಯ ಗಾಂಧಿ ನಗರದಲ್ಲಿ ನಡೆದಿದೆ.
ಮೈಲಾರಿ(39) ಎಂಬ ವ್ಯಕ್ತಿ ಹೆಂಡತಿಯ ಮೇಲೆ ಸದಾ ಅನುಮಾನ ಪಡುತ್ತಿದ್ದನಂತೆ. ಇದರಿಂದ ಆಕ್ರೋಶಗೊಂಡ ಪತ್ನಿಯ ಸಹೋದರ ತನ್ನ ಬಾವನ ಕಿವಿಯನ್ನೇ ಕತ್ತರಿಸಿದ್ದಾನೆ. ತನ್ನ ಬಾಯಿಯಿಂದ ಬಾವನ ಕಿವಿ ಕಚ್ಚಿದ್ದಾನೆ.
ಅಕ್ಕನ ನಡೆತ ಪ್ರಶ್ನಿಸಿದ ಬಾವನ ಕಿವಿ ಕತ್ತರಿಸಿದ ಬಾಮೈದ ಘಟನೆಯಲ್ಲಿ ತೀವ್ರ ಗಾಯಗೊಂಡ ಮೈಲಾರಿ, ಸಾಕ್ಷಿಗಾಗಿ ಪ್ಲಾಸ್ಟಿಕ್ ಬಾಟಲ್‌ನಲ್ಲಿ ತನ್ನ ಕಿವಿಯನ್ನು ತಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾನೆ. ಈ ಸಂಬಂಧ ಮೈಲಾರಿಯ ಪತ್ನಿ, ಅತ್ತೆ ಹಾಗೂ ಮೈದುನನ ವಿರುದ್ಧ ಚಳ್ಳಕೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮೂರು ಕಾರುಗಳಿದ್ದರೂ ಮತ್ತೊಂದು ಕಾರಿಗೆ ಬೇಡಿಕೆ ಇಟ್ಟ ಶಾಸಕ ರಾಜಕುಮಾರ ಪಾಟೀಲ