ಚಿತ್ರದುರ್ಗ:ಗ್ರಾಮ ಪಂಚಾಯಿತಿ ಚುನಾವಣೆಗೆ ಇಂದು ನಡೆಯುತ್ತಿರುವ ಮತದಾನದ ವೇಳೆ ಚಿತ್ರದುರ್ಗ ತಾಲೂಕಿನ ಮಠದ ಕುರುಬರಹಟ್ಟಿ ಗ್ರಾಮದ ಮದುಮಗಳು ತನ್ನ ಹಕ್ಕು ಚಲಾಯಿಸಿದ್ದಾಳೆ.
ಚಿತ್ರದುರ್ಗ: ಮದುವೆಗೂ ಮುನ್ನ ಮತ ಮರೆಯದ ಮದುಮಗಳು - Chitradurga Latest Update News
ಮದುವೆಗೂ ಮುನ್ನ ಚಿತ್ರದುರ್ಗ ತಾಲೂಕಿನ ಮಠದ ಕುರುಬರಹಟ್ಟಿ ಗ್ರಾಮದ ಮದುಮಗಳು ತನ್ನ ಹಕ್ಕು ಚಲಾಯಿಸಿದ್ದಾಳೆ.
ವಧು ಭವಾನಿ
ಗ್ರಾಮದ ಭವಾನಿ ಎಂಬ ಯುವತಿ ಮತದಾನ ಮಾಡಿದ ಬಳಿಕವಷ್ಟೇ ಮದುವೆ ಮಂಟಪಕ್ಕೆ ತೆರಳಿದ್ದಾಳೆ. ಬೇರೆ ಗ್ರಾಮದಲ್ಲಿ ನಾಳೆ ಇವರ ಮದುವೆ ನಿಶ್ಚಯವಾಗಿದ್ದು, ಅರಶಿನ ಶಾಸ್ತ್ರ ಮುಗಿಯುತ್ತಿದ್ದಂತೆ ತನ್ನ ಸಹೋದರನೊಂದಿಗೆ ಮತಗಟ್ಟೆಗೆ ಬಂದಿದ್ದಾಳೆ.