ಚಿತ್ರದುರ್ಗ:ಚಿತ್ರದುರ್ಗದಲ್ಲಿ ನಿನ್ನೆ 17 ವರ್ಷದ ಹುಡುಗ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ.
ನಗರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಪ್ರಕಾಶ್ ಆರೋಗ್ಯವಾಗಿಯೇ ಇದ್ದ. ಎಲ್ಲ ಮಕ್ಕಳಂತೆ ಲವಲವಿಕೆಯಿಂದ ಇದ್ದ ಪ್ರಕಾಶ್ ಎಂದಿನಂತೆ ಬೆಳಗ್ಗೆ 8.30ಕ್ಕೆ ತಿಂಡಿ ತಿಂದು ಕಾಲೇಜಿಗೆ ಹೋಗಿದ್ದಾನೆ. ಆದರೆ, ಕಾಲೇಜಿಗೆ ಹೋದವನು ಅಸ್ವಸ್ಥನಾಗಿ ಬಳಿಕ ಉಸಿರೇ ನಿಲ್ಲಿಸಿದ್ದಾನೆ ಎನ್ನುತ್ತಾರೆ ಪ್ರಕಾಶ್ ಪಾಲಕರು.
ಬೆಳಗ್ಗೆ ಕಾಲೇಜಿಗೆ ಬಂದ ಪ್ರಕಾಶ್ ಮೆಟ್ಟಿಲೇರಿಕೊಂಡು ಕ್ಲಾಸ್ ರೂಮ್ಗೆ ಹೋಗುವ ವೇಳೆ ಎದೆ ನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾನೆ. ಆಗ ಜೊತೆಯಲ್ಲಿದ್ದ ಸ್ನೇಹಿತರು ಕಾಲೇಜು ಸಿಬ್ಬಂದಿ ಗಮನಕ್ಕೆ ತಂದು ಅವನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.