ಚಿತ್ರದುರ್ಗ:ಜಿಲ್ಲೆಯಲ್ಲಿಮಳೆ ಆಗಮಿಸುತ್ತಿದ್ದಂತೆ ತಮ್ಮ ಬೋರ್ವೆಲ್ಗಳನ್ನು ಮರೆತಿರುವ ರೈತರಿಗೆ ಕಳ್ಳರು ಕೇಬಲ್ ಕದಿಯುವ ಮೂಲಕ ಶಾಕ್ ನೀಡಿದ್ದಾರೆ. ಹೊಸದುರ್ಗ ತಾಲೂಕಿನ ಹಕ್ಕಿತಿಮ್ಮಯ್ಯನಹಟ್ಟಿ ಗ್ರಾಮದ 25 ಬೋರ್ವೆಲ್ಗಳ ಕೇಬಲ್ಗಳನ್ನು ಕಳ್ಳರು ಕದ್ದಿದ್ದಾರೆ.
ವರುಣನ ಆಗಮನದ ಖುಷಿಯಲ್ಲಿ ಕೊಳವೆ ಬಾವಿ ಮರೆತ ರೈತ... ಕಳ್ಳರು ಮಾಡಿದ್ದೇನು ಗೊತ್ತಾ? - ಕೊಳವೆ ಬಾವಿ ಮರೆತ ರೈತ
ಚಿತ್ರದುರ್ಗದಲ್ಲಿ ಮಳೆ ಆಗಮಿಸುತ್ತಿದ್ದಂತೆ ತಮ್ಮ ಬೋರ್ವೆಲ್ಗಳನ್ನು ಮರೆತಿರುವ ರೈತರಿಗೆ ಕಳ್ಳರು ಕೇಬಲ್ ಕದಿಯುವ ಮೂಲಕ ಶಾಕ್ ನೀಡಿದ್ದಾರೆ.
ಮಳೆಯಿಲ್ಲದೆ ಪರಿತಪಿಸುತಿದ್ದ ರೈತರು ಪ್ರತಿದಿನ ತಪ್ಪದೇ ಬೋರ್ವೆಲ್ ಚಾಲು ಮಾಡುತ್ತಿದ್ದರು. ಅದ್ರೆ ಒಂದು ತಿಂಗಳಿಂದ ತಾಲೂಕಿನಲ್ಲಿ ಸಮೃದ್ಧಿ ಮಳೆಯಾದ ಪರಿಣಾಮ ರೈತರು ಬೋರ್ವೆಲ್ಗಳ ಕಡೆ ತಲೆಯೇ ಹಾಕಿರಲಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ಇದರಿಂದ ರೈತರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಅಲ್ಲದೆ ಒಂದೊಂದು ಬೋರ್ವೆಲ್ ಮೋಟಾರ್ ಮೇಲೆತ್ತಿ ಕೇಬಲ್ ಜೋಡಿಸಿಕೊಳ್ಳವ ಅನಿವಾರ್ಯತೆ ಎದುರಾಗಿದೆ. ಇನ್ನೂ ಬೇರೆ ಬೇರೆ ಜಮೀನುಗಳಲ್ಲಿ ಕೇಬಲ್ ಕಳ್ಳತನ ಮಾಡುವ ಸಾಧ್ಯತೆಯಿದ್ದು, ರಾತ್ರಿ, ಹಗಲು ವೇಳೆ ಅನುಮಾನಾಸ್ಪದವಾಗಿ ತಿರುಗಾಡುವ ವ್ಯಕ್ತಿಗಳ ಮೇಲೆ ಗ್ರಾಮಸ್ಥರು ನಿಗವಹಿಸಿದ್ದಾರೆ.