ಚಿತ್ರದುರ್ಗ:ಮನೆಯೊಂದರಲ್ಲಿ ಅಮವಾಸ್ಯೆ ಹಿಂದಿನ ದಿನ ವಾಮಾಚಾರಕ್ಕೆ ಬಳಕೆ ಮಾಡುವ ವಸ್ತುಗಳು ಲಭ್ಯವಾಗಿದ್ದು, ಈ ವಿಚಿತ್ರ ಘಟನೆಯಿಂದ ಮನೆಯ ಸದಸ್ಯರು ಬೆಚ್ಚಿಬಿದ್ದಿರುವ ಘಟನೆ ನಗರದ ಚಿಕ್ಕಪೇಟೆ ಬಡಾವಣೆಯಲ್ಲಿ ನಡೆದಿದೆ.
ಮಧ್ಯರಾತ್ರಿ ಮನೆಯಲ್ಲಿ ವಾಮಾಚಾರಕ್ಕೆ ಬಳಸುವ ವಸ್ತುಗಳು ಪತ್ತೆ: ಬೆಚ್ಚಿ ಬಿದ್ದ ಕುಟುಂಬಸ್ಥರು - Black magic things found
ಮನೆಯೊಂದರಲ್ಲಿ ಅಮವಾಸ್ಯೆ ಹಿಂದಿನ ದಿನ ವಾಮಾಚಾರಕ್ಕೆ ಬಳಕೆ ಮಾಡುವ ವಸ್ತುಗಳು ಲಭ್ಯವಾಗಿದ್ದು, ಈ ವಿಚಿತ್ರ ಘಟನೆಯಿಂದ ಮನೆಯ ಸದಸ್ಯರು ಬೆಚ್ಚಿಬಿದ್ದಿರುವ ಘಟನೆ ನಗರದ ಚಿಕ್ಕಪೇಟೆ ಬಡಾವಣೆಯಲ್ಲಿ ನಡೆದಿದೆ.
ಇಲ್ಲಿನ ಪ್ರಸನ್ನಕುಮಾರ್ ಎಂಬುವರ ಮನೆಯಲ್ಲಿ ಕಳೆದ ರಾತ್ರಿ ಎಂದಿನಂತೆ ಊಟ ಮಾಡಿ ಮನೆಯ ಸದಸ್ಯರು ಮಲಗಿದ್ದ ವೇಳೆ ವಿಚಿತ್ರ ದೃಶ್ಯಗಳನ್ನು ಕಂಡು ಚಿಂತಾಕ್ರಾಂತರಾಗಿದ್ದಾರೆ. ಮನೆಯ ಮಧ್ಯರಾತ್ರಿ ಮನೆಯಲ್ಲಿ ಸುಟ್ಟವಾಸನೆ ಬಂದಾಗ ಮಾಲೀಕ ಪ್ರಸನ್ನ, ಪತ್ನಿ ಅನ್ನಪೂರ್ಣ, ಇಬ್ಬರು ಹೆಣ್ಣುಮಕ್ಕಳು ಗಾಬರಿಯಿಂದ ಎದ್ದು ನೋಡಿದಾಗ ವಾಮಾಚಾರದ ಪರಿಯನ್ನು ಕಂಡು ಆತಂಕಗೊಂಡಿದ್ದಾರೆ.
ನಾಲ್ವರು ಮಲಗಿದ್ದ ಹಾಸಿಗೆಯ ಮೇಲೆ ಲೀಟರ್ ಗಟ್ಟಲೆ ಅಡುಗೆ ಎಣ್ಣೆ, ಕರ್ಪೂರದ ಜೊತೆಗೆ ಬಟ್ಟೆ ಇದ್ದಕ್ಕಿದ್ದಂತೆ ಧಗಧಗನೆ ಹೊತ್ತಿ ಉರಿದಿದೆ. ಏನಾಗುತ್ತಿದೆ ಎಂದು ನೋಡುವಷ್ಟರಲ್ಲಿ ತಾವು ಮಲಗಿದ್ದ ಹಾಸಿಗೆ ಹಾಗೂ ನೆಲದಲ್ಲಿ ಚೆಲ್ಲಿರೋ ಎಣ್ಣೆ ನೋಡಿ ಗಾಬರಿಯಿಂದ ಮನೆಯಿಂದ ಜನ ಹೊರ ಬಂದಿದ್ದಾರೆ. ಇನ್ನು ಚಿತ್ರದುರ್ಗ ನಗರ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.