ಚಿತ್ರದುರ್ಗ: ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಿದ್ದರಿಂದ ಹಿರಿಯೂರು ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ನಿರಾಸೆಯಾಗಿದೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಸ್ವಪಕ್ಷದ ವಿರುದ್ದ ಬಿಜೆಪಿ ಶಾಸಕಿ ಅಸಮಾಧಾನ. ಶಿರಾ, ಬಸವಕಲ್ಯಾಣ ಉಪ ಚುನಾವಣೆ, ಲೋಕಸಭೆ ಚುನಾವಣೆಗಳಲ್ಲಿ ಪಕ್ಷ ನಿಷ್ಠೆಯಿಂದ ಕೆಲಸ ಮಾಡಿದ್ದೆ. ಗೊಲ್ಲ, ಹಿಂದುಳಿದ ಸಮುದಾಯದ ಮತ ಸೆಳೆಯುವ ಕೆಲಸವನ್ನು ನಿಷ್ಠೆಯಿಂದ ಮಾಡಿರುವುದು ಎಲ್ಲರಿಗೂ ಗೊತ್ತಿದೆ. ಪತಿ ಶ್ರೀನಿವಾಸ್ ಪಕ್ಷೇತರರಾಗಿ ಎಂಎಲ್ಸಿ ಚುನಾವಣೆಗೆ ಸ್ಪರ್ಧಿಸಿದ್ದರು. ಆಗಲೂ ನಾನು ಪಕ್ಷ ನಿಷ್ಠೆಯಿಂದ ಶಿರಾ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದೆ. ಆದರೀಗ ಪಕ್ಷ ಜಾಣ ಕುರುಡುತನ ಪ್ರದರ್ಶಿಸಿರುವುದು ನೋವುಂಟು ಮಾಡಿದೆ ಎಂದು ಬರೆದುಕೊಂಡಿದ್ದಾರೆ.
ಸ್ವಪಕ್ಷದ ವಿರುದ್ದ ಬಿಜೆಪಿ ಶಾಸಕಿ ಅಸಮಾಧಾನ. ಗೊಲ್ಲ ಸಮುದಾಯದ ಏಕೈಕ ಶಾಸಕಿ ಆಗಿದ್ದೇನೆ. ಎಂದೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ. ಯಾವುದೇ ಹಗರಣ ನನಗೆ ಸುತ್ತಿಕೊಂಡಿಲ್ಲ. ಆದರೀಗ ಪಕ್ಷ ತೆಗೆದುಕೊಂಡ ನಿರ್ಧಾರ ನನಗೆ ಘಾಸಿ ಉಂಟು ಮಾಡಿದೆ. ಹಗರಣದಲ್ಲಿ ಸಿಲುಕಿಕೊಂಡವರಿಗೆ ಮತ್ತೆ ಮಂತ್ರಿಗಿರಿ. ಒಂದೇ ಮನೆಯಲ್ಲಿ ಎರಡು- ಮೂರು ಅಧಿಕಾರ ನೀಡಲಾಗಿದೆ. ಹಗರಣ ಇಲ್ಲದ ಮಹಿಳೆಗೆ ಅವಕಾಶ ನೀಡಿದ್ದರೆ ಸಂತೋಷದಿಂದ ಸ್ವಾಗತಿಸುತ್ತಿದ್ದೆ. ಇನ್ನೊಬ್ಬ ಶಾಸಕಿಗೂ ಪಕ್ಷ ಅವಮಾನ ಮಾಡಿದಂತಾಗಿದೆ. ಜಿಲ್ಲೆಯ ಇತರೆ ಶಾಸಕರಿಗೂ ಮಂತ್ರಿಗಿರಿ ನೀಡದೆ ಅವಮಾನಿಸಲಾಗಿದೆ ಎಂದು ತಮ್ಮ ನೋವನ್ನು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತೋಡಿಕೊಂಡಿದ್ದಾರೆ.
ಓದಿ:29 ಸಚಿವರ ಪ್ರಮಾಣ : ಬೊಮ್ಮಾಯಿ ಸಂಪುಟ ಬಹುತೇಕ ಭರ್ತಿ