ಚಿತ್ರದುರ್ಗ :ಜಿಲ್ಲೆಯಲ್ಲಿ ಅರಣ್ಯ ಸಂಪತ್ತು ಹೆಚ್ಚಿಸುವ ಸಲುವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ ನೇತೃತ್ವದಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಹುಟ್ಟುಹಬ್ಬದ ಪ್ರಯುಕ್ತ ರಾಜ್ಯದಲ್ಲಿಯೇ ಮೊದಲ ಬಾರಿಗೆ ಬೀಜದುಂಡೆಗಳನ್ನು ತಯಾರಿಸಿ ಜೋಗಿಮಟ್ಟಿ ಅರಣ್ಯದಲ್ಲಿ ‘ಸೀಡ್ಬಾಲ್’ಎಸೆಯುವ ಕಾರ್ಮಕ್ರಮ ಹಮ್ಮಿಕೊಳ್ಳಲಾಗಿತ್ತು.
ಇತ್ತೀಚಿನ ದಿನಗಳಲ್ಲಿ ಕಾಡುಗಳ್ಳರ ಉಪಟಳದಿಂದ ಅರಣ್ಯ ನಾಶವಾಗುತ್ತಿದೆ. ಇದಕ್ಕಾಗಿ ಗಿಡ-ಮರಗಳನ್ನು ಬೆಳೆಸುವ ನಿಟ್ಟಿನಲ್ಲಿ ಸುಮಾರು 21 ಸಾವಿರ ಬೀಜದುಂಡೆಗಳನ್ನು ಬಿಜೆಪಿ ಕಾರ್ಯಕರ್ತರು ಮೂರು ದಿನಗಳಿಂದ ತಯಾರಿಸಿದ್ದಾರೆ. ಇಂದು ಆ ಬೀಜದುಂಡೆಗಳನ್ನು ಕಾಡಿನಲ್ಲಿ ಎಸೆದು ಅರಣ್ಯ ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ.