ಚಿತ್ರದುರ್ಗ :ಕಬ್ಬಿಣದ ಅದಿರು ಸಾಗಿಸುವ ಲಾರಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ವಾಲ್ಮೀಕಿ ವೃತ್ತದಲ್ಲಿ ಮೈನ್ಸ್ ಲಾರಿ ಚಾಲಕ ಅಜಾಗರೂಕತೆಯಿಂದಾಗಿ ಈ ಅಪಘಾತ ನಡೆದಿದ್ದು, ರಾಥೋಡ್ (12) ಎಂಬ ಬಾಲಕ ಸಾವನ್ನಪ್ಪಿದ್ದಾನೆ.
ಕಬ್ಬಿಣದ ಅದಿರು ಸಾಗಿಸುವ ಲಾರಿ ಬೈಕ್ಗೆ ಡಿಕ್ಕಿ : ಸ್ಥಳದಲ್ಲೇ ಬೈಕ್ ಸವಾರ ಸಾವು - mines lorry and bike collid news
ಅಪಘಾತ ನಡೆದು 20 ನಿಮಿಷ ಕಳೆದರೂ ಮೃತ ದೇಹವನ್ನು ತೆರವುಗೊಳಿಸದೇ ಇದ್ದಿದ್ದರಿಂದ ಟ್ರಾಫಿಕ್ ಜಾಮ್ ಏರ್ಪಟ್ಟು ಪೊಲೀಸ್ ಇಲಾಖೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಯಿತು. ನಂತರ ಸ್ಥಳಕ್ಕೆ ಚಳ್ಳಕೆರೆ ನಗರ ಪೊಲೀಸ್ ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿದ್ದಾರೆ..
ಸ್ಥಳದಲ್ಲೇ ಬೈಕ್ ಸವಾರ ಸಾವು
ಮತ್ತೋರ್ವ ಬೈಕ್ ಸವಾರ ರಮೇಶ ನಗರಂಗೆರೆ ಗಾಯಗೊಂಡು ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತ ನಡೆದು 20 ನಿಮಿಷ ಕಳೆದರೂ ಮೃತ ದೇಹವನ್ನು ತೆರವುಗೊಳಿಸದೇ ಇದ್ದಿದ್ದರಿಂದ ಟ್ರಾಫಿಕ್ ಜಾಮ್ ಏರ್ಪಟ್ಟು ಪೊಲೀಸ್ ಇಲಾಖೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಯಿತು. ನಂತರ ಸ್ಥಳಕ್ಕೆ ಚಳ್ಳಕೆರೆ ನಗರ ಪೊಲೀಸ್ ಭೇಟಿ ನೀಡಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:ವಾಹನ ತಪಾಸಣೆ ವೇಳೆ ಡಿಕ್ಕಿ, ಸವಾರ ಸಾವು: ಸ್ಥಳದಲ್ಲಿ ಉದ್ದಿಗ್ನ ಪರಿಸ್ಥಿತಿ