ಚಿತ್ರದುರ್ಗ: ಬೈಕ್ ಮತ್ತು ಟಿಪ್ಪರ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಹಿನ್ನೆಲೆ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಟಿಪ್ಪರ್ ಧಗಧಗನೆ ಹೊತ್ತಿ ಉರಿದ ಘಟನೆ ಚಿತ್ರದುರ್ಗ ತಾಲೂಕಿನ ಕಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿತ್ರದುರ್ಗ ತಾಲೂಕಿನ ಇಂಗಳದಾಳ್ ಗ್ರಾಮದ ರಂಗಪ್ಪ (60) ಮೃತ ವ್ಯಕ್ತಿ. ಜೋಗಿಮಟ್ಟಿ ರಸ್ತೆ ನಿವಾಸಿ ಹನುಮಂತಪ್ಪ ಗಂಭೀರವಾಗಿ ಗಾಯಗೊಂಡಿದ್ದು, ದಾವಣಗೆರೆ ಎಸ್ ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿತ್ರದುರ್ಗದಿಂದ ಚಳ್ಳಕೆರೆ ಕಡೆಗೆ ಟಿಪ್ಪರ್ ಹೊರಟಿತ್ತು. ಚಳ್ಳಕೆರೆ ಮಾರ್ಗದಿಂದ ಚಿತ್ರದುರ್ಗದ ಕಡೆ ಬೈಕ್ ಸವಾರರು ಬರುತ್ತಿದ್ದಾಗ ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಟಿಪ್ಪರ್ ಚಕ್ರದಡಿ ಬೈಕ್ ಸಿಲುಕಿದ್ದು, ಈ ವೇಳೆ ಟಿಪ್ಪರ್ ಪೆಟ್ರೋಲ್ ಟ್ಯಾಂಕ್ ಡ್ಯಾಮೇಜ್ ಆಗಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಧಗಧಗನೆ ಹೊತ್ತಿ ಉರಿದಿದೆ.